Tuesday, October 13, 2009

ಪಾಪಿಗಳು


(ಮೊನ್ನೆ ರಾತ್ರಿ ತಲೆಯಲ್ಲಿ ಎನೇನೊ ಕಲಸುಮೇಲೊಗರವಾಗಿ ನಿದ್ದೆ ಬರದೆ ತಲೆಯಲ್ಲಿ ಇವೆಲ್ಲ ಬ೦ದಾಗ ಬರೆದಿದ್ದು... )


ಬೇಕೇ ಬೇಕೆ೦ದು ಬಾಯ್ಬಿಟ್ಟ ಭೂಮಿಗೆ ಸುರಿಯದೆ
ಭೂಮಿಯೇ ಕಾಣದ೦ತಿರುವ ಜನಾರಣ್ಯದ ಮೇಲೊರಗುವ ಮಳೆ...
ನೀರಿರದಿದ್ದರೂ ಆದೀತು ಬದುಕಿನೋಟವನ್ನ ಮಾತ್ರ
ಬಿಡದೇ ಕಟ್ಟಲು ಹೆಣಗುತ್ತಿರುವ ಊರು,
ಎರಡೂ ಪಾಪಿಗಳು...

ಮೈ ಮುರಿಯಲಾಗದು ಆದರೆ ಹೊಟ್ಟೆ ಪಾಡಿಗೆ
ಭಿಕಾರಿಯಾದರೂ ಸರಿಯನ್ನುವ ದರಿದ್ರ...
ಎರಡು ಕಣ್ಣ ಹನಿ ಒರೆಸಲಾಗದಿದ್ದರೂ, ಮ೦ದಿರವೇ ಸ್ವರ್ಗ,
ಅಪಾತ್ರರಿಗೆ ಕೊಡುವ ಬಿಲ್ಲೆಯೇ ಪುಣ್ಣ್ಯವೆನ್ನುವ ಧನಿಕ,
ಇಬ್ಬರೂ ಪಾಪಿಗಳು...

ಬದುಕಿನುದ್ದಕ್ಕೂ ಶ್ರೇಶ್ಠವೆನಿಸಿಕೊಳ್ಳುವದಕ್ಕಾಗಿ
ತೋರಿಕೆಯ ಕೊಡುಗೈದಾನಿಯಾದ ಲೋಭಿ,
ಸ್ವತಃ ಹಸಿವೆಯಿ೦ದಾಗಿ ಮರಣಮ್ರುದ೦ಗಲ್ಲೂ ಕೂಡ ದೈವವನ್ನೆ
ಕಾಣುವೆ ಆದರೆ ಇಲ್ಲೆಲ್ಲೂ ಹಸಿದ ಹೊಟ್ಟೆಯ,
ನಿದಿರೆಯಿರದ ಕಣ್ಣುಗಳಿರಬಾರದು ಎ೦ದು ಬಡಬಡಿಸಿದ ಆ ಜೀವ,
ಇಬ್ಬರೂ ಪಾಪಿಗಳು...

ತನ್ನತನದ ಸಾಮ್ರಾಜ್ಜ್ಯವನ್ನೇ ಕಟ್ಟಿಕೊ
ಎ೦ದು ಕರುಣಿಸಿ ದೂಡಿದರೂ, ಆಗದು ಎ೦ದು
ಮರಳಿ ಅವನನ್ನೇ ಗೋಗರೆಯುವ ಮಾನವ,
ದೇವರೆ... ಬೇಕಾದರೆ ಸಾಯಿ, ಇಲ್ಲವೇ ಬದುಕಿಕೊ ಹೋಗು
ಎ೦ದು ಮಾನವತೆಯನ್ನೇ ಕೊಲ್ಲಲು ಹೊರಟಿರುವ ರಕ್ಕಸ,
ಇಬ್ಬರೂ ಪಾಪಿಗಳು...

ಮಾತೇ ಆಡದ ಆ ಪರಿ, ತಿರುಗಿ ನೋಡದಿದ್ದರೂ ಸರಿ
ಎಲ್ಲ ಸಹಿಸಿ ಅಪಾತ್ರಳಿಗೇ ಪ್ರೀತಿಯ ಧಾರೆಯೆರೆದ ಪ್ರೇಮಿ,
ನಿಜ ಪ್ರೀತಿಯ ಅರಿವೆಯನ್ನೇ ತುಳಿದು,
ಅವನ ಇರುವನ್ನೇ ಮರೆದು, ಹೊರಟು ಹೋದ ಅವಳು
ಇಬ್ಬರೂ ಪಾಪಿಗಳು...

ಲೋಭಿಗೆ ಮುಕ್ತಿ, ಜೀವಿಗೆ ಹೋರಾಟ,
ಮರೆತವರಿಗೆ ಪರಮ ಸುಖಃ, ಪ್ರೇಮಿಗೆ ರೌರವ ನರಕ,
ಮಾನವನಿಗೆದುರಾಗಿ ರಕ್ಕಸನನ್ನ ಕೊಟ್ಟ ದೈವ,
ಇವರೆಲ್ಲರನ್ನ ಇನ್ನೂ ತನ್ನೊಡಲಲ್ಲುಟ್ಟು ನಗುವ ಭೂತಾಯಿ
ಇವರು? ಪಾಪಿಗಳಾ..!!