Wednesday, June 2, 2010

ಬಂದರೆ ಬಾ ಸಾವಿನ ಹಾಗೆ, ತಿರುಗಿ ಮತ್ತೆ ಹೋಗದ ಹಾಗೆ...


ತೆರೆ ತೆರೆಗಳ ಹಾಗೆ ಮಾತಾಡಲಿಲ್ಲ, ಮೌನದಲಿದ್ದೇ ನೋಡಲಿಲ್ಲ
ರೆಪ್ಪೆಗಳ ದಾಟಿ ನುಗ್ಗಲಿಲ್ಲ, ಜಿದ್ದಿಗೆ ಬಿದ್ದು ಮುನಿಯಲಿಲ್ಲ
ಕೈ ಹಿಡಿದು ನಡೆಯಲಿಲ್ಲ, ಹಿಡಿದುಕೊಂಡು ಓಡಲಿಲ್ಲ
ತಬ್ಬಿ ಅಳಲಿಲ್ಲ, ನಿಂತು ನಗಲಿಲ್ಲ
ಕಡೆಗೆ ಜೀವಿಸಲೂ ಇಲ್ಲ....ತಿರುಗಿ ನೋಡಲಿಲ್ಲ...

ಮತ್ತೆ ಬಾ....

ಮತ್ತೆ ಬಾ....
ಬಂದರೆ ಬಾ ಸಾವಿನ ಹಾಗೆ, ಮತ್ತೆ ತಿರುಗಿ ಹೋಗದ ಹಾಗೆ.

Tuesday, October 13, 2009

ಪಾಪಿಗಳು


(ಮೊನ್ನೆ ರಾತ್ರಿ ತಲೆಯಲ್ಲಿ ಎನೇನೊ ಕಲಸುಮೇಲೊಗರವಾಗಿ ನಿದ್ದೆ ಬರದೆ ತಲೆಯಲ್ಲಿ ಇವೆಲ್ಲ ಬ೦ದಾಗ ಬರೆದಿದ್ದು... )


ಬೇಕೇ ಬೇಕೆ೦ದು ಬಾಯ್ಬಿಟ್ಟ ಭೂಮಿಗೆ ಸುರಿಯದೆ
ಭೂಮಿಯೇ ಕಾಣದ೦ತಿರುವ ಜನಾರಣ್ಯದ ಮೇಲೊರಗುವ ಮಳೆ...
ನೀರಿರದಿದ್ದರೂ ಆದೀತು ಬದುಕಿನೋಟವನ್ನ ಮಾತ್ರ
ಬಿಡದೇ ಕಟ್ಟಲು ಹೆಣಗುತ್ತಿರುವ ಊರು,
ಎರಡೂ ಪಾಪಿಗಳು...

ಮೈ ಮುರಿಯಲಾಗದು ಆದರೆ ಹೊಟ್ಟೆ ಪಾಡಿಗೆ
ಭಿಕಾರಿಯಾದರೂ ಸರಿಯನ್ನುವ ದರಿದ್ರ...
ಎರಡು ಕಣ್ಣ ಹನಿ ಒರೆಸಲಾಗದಿದ್ದರೂ, ಮ೦ದಿರವೇ ಸ್ವರ್ಗ,
ಅಪಾತ್ರರಿಗೆ ಕೊಡುವ ಬಿಲ್ಲೆಯೇ ಪುಣ್ಣ್ಯವೆನ್ನುವ ಧನಿಕ,
ಇಬ್ಬರೂ ಪಾಪಿಗಳು...

ಬದುಕಿನುದ್ದಕ್ಕೂ ಶ್ರೇಶ್ಠವೆನಿಸಿಕೊಳ್ಳುವದಕ್ಕಾಗಿ
ತೋರಿಕೆಯ ಕೊಡುಗೈದಾನಿಯಾದ ಲೋಭಿ,
ಸ್ವತಃ ಹಸಿವೆಯಿ೦ದಾಗಿ ಮರಣಮ್ರುದ೦ಗಲ್ಲೂ ಕೂಡ ದೈವವನ್ನೆ
ಕಾಣುವೆ ಆದರೆ ಇಲ್ಲೆಲ್ಲೂ ಹಸಿದ ಹೊಟ್ಟೆಯ,
ನಿದಿರೆಯಿರದ ಕಣ್ಣುಗಳಿರಬಾರದು ಎ೦ದು ಬಡಬಡಿಸಿದ ಆ ಜೀವ,
ಇಬ್ಬರೂ ಪಾಪಿಗಳು...

ತನ್ನತನದ ಸಾಮ್ರಾಜ್ಜ್ಯವನ್ನೇ ಕಟ್ಟಿಕೊ
ಎ೦ದು ಕರುಣಿಸಿ ದೂಡಿದರೂ, ಆಗದು ಎ೦ದು
ಮರಳಿ ಅವನನ್ನೇ ಗೋಗರೆಯುವ ಮಾನವ,
ದೇವರೆ... ಬೇಕಾದರೆ ಸಾಯಿ, ಇಲ್ಲವೇ ಬದುಕಿಕೊ ಹೋಗು
ಎ೦ದು ಮಾನವತೆಯನ್ನೇ ಕೊಲ್ಲಲು ಹೊರಟಿರುವ ರಕ್ಕಸ,
ಇಬ್ಬರೂ ಪಾಪಿಗಳು...

ಮಾತೇ ಆಡದ ಆ ಪರಿ, ತಿರುಗಿ ನೋಡದಿದ್ದರೂ ಸರಿ
ಎಲ್ಲ ಸಹಿಸಿ ಅಪಾತ್ರಳಿಗೇ ಪ್ರೀತಿಯ ಧಾರೆಯೆರೆದ ಪ್ರೇಮಿ,
ನಿಜ ಪ್ರೀತಿಯ ಅರಿವೆಯನ್ನೇ ತುಳಿದು,
ಅವನ ಇರುವನ್ನೇ ಮರೆದು, ಹೊರಟು ಹೋದ ಅವಳು
ಇಬ್ಬರೂ ಪಾಪಿಗಳು...

ಲೋಭಿಗೆ ಮುಕ್ತಿ, ಜೀವಿಗೆ ಹೋರಾಟ,
ಮರೆತವರಿಗೆ ಪರಮ ಸುಖಃ, ಪ್ರೇಮಿಗೆ ರೌರವ ನರಕ,
ಮಾನವನಿಗೆದುರಾಗಿ ರಕ್ಕಸನನ್ನ ಕೊಟ್ಟ ದೈವ,
ಇವರೆಲ್ಲರನ್ನ ಇನ್ನೂ ತನ್ನೊಡಲಲ್ಲುಟ್ಟು ನಗುವ ಭೂತಾಯಿ
ಇವರು? ಪಾಪಿಗಳಾ..!!

Wednesday, March 11, 2009

ಪ್ರತ್ಯುತ್ತರ

ಒಂದು ವರುಷದ ಹಿಂದೆ ನಾನು ಮತ್ತು ನನ್ನ ಹುಬ್ಬಳ್ಳಿಯ ರೆಡ್ಡಿ ಹಾಸ್ಟೆಲ್ ಸ್ನೇಹಿತ (ಪ್ರೆಂಡು!) ಇಬ್ಬರೂ ಸೇರಿ ಒಂದು ಮನೆಯನ್ನ ಬಾಡಿಗೆ ತೆಗೆದುಕೊಳ್ಳುವುದು ಎಂದು ತೀರ್ಮಾನಿಸಿದೆವು.
ನಾವುಗಳೆಲ್ಲ ಮೊದಲು ಇದ್ದದ್ದು ೧ ಬೆಡ್ ರೂಮಿನ ಒಂದು ಚಿಕ್ಕ ರೂಮಿನಲ್ಲಿ (ಹೆಸರಿಗೆ 1 ಬೆಡ್ ರೂಮು, ಸುಮಾರಾದ ಒಂದು ಬೆಡ್ ರೂಮಿನ ನಡುವೆ ಒಂದು ಗೋಡೆಯನ್ನ ಕಟ್ಟಿ ಒಂದು ಭಾಗವನ್ನ ಅಡುಗೆ ಮನೆ ಹಾಗೂ ಇನ್ನೊದು ಭಾಗವನ್ನ ಬೇಡ್ರೂಮೆಂದು ನಾಮಕರಣ ಮಾಡಿ ಬಾಡಿಗೆಗೆ ಬಿಡುತ್ತಾರೆ...!!). ಅಸ್ಟು ದೊಡ್ಡ ಮನೆಯಲ್ಲಿ ನಾವೆಲ್ಲಾ ಸೇರಿ ಇದ್ದು ಆರೇ ಆರು ಜನ!! ತಿಂಗಳಿಗೊಮ್ಮೆ ನಮ್ಮ ಪರಿಚಿತರೋ, ನಮ್ಮ ಸ್ನೇಹಿತರ ಪರಿಚಿತರೋ, ಪರಿಚಿತರಿಗೆ ಪರಿಚಯವಿರುವ ಪರಿ-ಪರಿಚಿತರೋ ಅಥವಾ ಸಂಭಂದಿಗರೋ, ಒಟ್ಟಿನಲ್ಲಿ ಯಾರಾದರು ಸ್ವಲ್ಪ ಜನ ಬೆಂಗಳೂರಿಗೆ ಕೆಲಸ ಹುಡುಕುವ ಕು-ಕಾರ್ಯಕ್ಕೆ ಬಂದಾಗ, ತಮಗೆ ಇನ್ನೊಂದು ಠಿಕಾಣಿ ಸಿಗುವ ವರೆಗೆ ನಮ್ಮ ರೂಮಿನಲ್ಲಿ ತಂಗುವುದಾಗಿ ಹೇಳಿಕೊಂಡು ಬರುತ್ತಿದ್ದರು. 2 ದಿನಕ್ಕೆ ಅಂತ ಬಂದವರು 2 ತಿಂಗಳುಗಳಾದರೂ ಹೋಗದೆ ಇದ್ದಾಗ ನಾವುಗಳೆಲ್ಲ ಅವರನ್ನು ಓಡಿಸಲು ಮಾಡುತ್ತಿದ್ದ ಕಸರತ್ತುಗಳದ್ದೆ ಒಂದು ದೊಡ್ಡ ಕಥೆಯಾಗುತ್ತೆ.
ಮೊದಲೇ ತಲೆ ಕೆಟ್ಟು ರೂಮಿಗೆ ಬರುತ್ತಿದ್ದ ನಾವು ಇಂಥಹ ಪರಿಸ್ಥಿತಿಯಲ್ಲಿ ಮಾನಸಿಕ ರೋಗಿಗಳಾಗುವ ಎಲ್ಲ ಗುಣಲಕ್ಷಣ ಒಂದೊಂದಾಗಿ ಗೊತ್ತಾದಾಗ, ಹಾಗೂ ಬೆಂಗಳೂರೆಂಬ ಜನ ತುಂಬಿದ ಹಾಳುಕೊಂಪೆಯಲ್ಲಿ ಕಛೇರಿಯಿಂದ ಸಜೆ ಮನೆಗೆ ಬಂದ ಕೂಡಲೇ ನೆಮ್ಮದಿ ಯಾಗಿ ಕಾಲ ಕಳೆಯಲು ಬೇರೆ ಮನೆಯನ್ನು ಮಾಡುವುದೆಂದು ಬಾಂಡ್ ಪೇಪರ್ ಮೇಲೆ ಸಹಿ ಮಾಡಿದೆವು. ಸಮಯಕ್ಕೆ ಸರಿಯಾಗಿ ಕೆಲಸ ಮಾಡುವ ಕಂಪನಿಯಲ್ಲಿ ನಮ್ಮಿಬ್ಬರ ಅನುಭವದ ಆಧಾರದ ಮೇಲೆ, ಬರುವ ಪಗಾರದಲ್ಲಿ ಏರಿಕೆಯಾಗಿದ್ದೂ ಇದಕ್ಕೆ ಕಾರಣವಾಗಿತ್ತು. ಹೀಗೆ ಈ ಮನೆಗೆ ನೆಮ್ಮದಿ ಅರಸುತ್ತ ಬಂದ ನಾವುಗಳು ಹಾಸ್ಟೆಲ್ ಮೆಟ್ ನಿಂದ ರೂಮ್ ಮೆಟ್ ಗಳಾಗಿ ಬಡ್ತಿ ಪಡೆದೆವು.

ಕಾರಣಾಂತರಗಳಿಂದ ನಾನು ಮತ್ತೆ ಮತ್ತೆ ಪ್ರವಾಸ ಮಾಡಿ, ಸರಿಯಾಗಿ ಒಂದು ತಿಂಗಳೂ ಕೂಡ ಈ ಹೊಚ್ಚ ಹೊಸ ಮನೆಯಲ್ಲಿ ಇರಲಾಗಿಲ್ಲ, ಆದರೆ ಬಾಂಡ್ ಪೇಪರ್ ಮೇಲೆ ಸಹಿ ಮಾಡಿದ (!) ಕಾರಣದಿಂದ ಒಂದೇ ಒಂದು ತಿಂಗಳು ಕೂಡ ತಪ್ಪಿಸದೇ ಬಾಡಿಗೆಯನ್ನ ನಾನು ನನ್ನ ರೂಮ್ ಮೇಟಿನ ಬ್ಯಾಂಕ್ ಖಾತೆಗೆ ಜಮ ಮಾಡುತ್ತೇನೆ. ಈ ಸಾರಿಯೂ ಕೂಡ ನಾನು ಹೀಗೆ ಮಾಡಿದಾಗ ನನ್ನ ಗೆಳೆಯ ನಾದ ರೂಮ್ ಮೆಟ್ ಸಂತಸದಿಂದ ಒಂದು ಪತ್ರ ಬರೆದ..ಅದಕ್ಕೆ ಪ್ರತ್ತ್ಯುತ್ತರವಾಗಿ ನಾನು ಬರೆದ ಪತ್ರವೇ ಇದು!. ಇಲ್ಲಿ ನನ್ನ ಮಿತ್ರ ರಫಿಯ ಪತ್ರಯೂ ಇದೆ :) (ಕೊ೦ಡಿಯ ಮೇಲೆ ಕ್ಲಿಕ್ಕಿಸಿ)

------------------------------------------------------------------------------------------------

ಪರಮ ಪ್ರಿಯ ಸ್ನೇಹಿತ ರಫಿಕಾ ಆ ಆ ಆ....

ಆ ದೇವರ ಲೀಲೆಯೇ ವಿಚಿತ್ರ ನೋಡು...

ದೇವರು ತಾನು ಎಲ್ಲ ಕಡೆ ಇರಲಾಗುವುದಿಲ್ಲ ಎಂಬ ಕಾರಣಕ್ಕೆ ತಾಯಿಯನ್ನು ಸೃಷ್ಟಿ ಮಾಡಿದನಂತೆ, ಹಾಗೆಯೇ ತಾಯಿಯೂ ಕೂಡ ಮಕ್ಕಳ ಜೊತೆ ಎಲ್ಲ ಸಮಯದಲ್ಲಿ ಇರಲಾಗುವುದಿಲ್ಲ ಎಂದು ಸ್ನೇಹಿತರನ್ನ ಸೃಷ್ಟಿ ಮಾಡಿದನಂತೆ!

ನಿನ್ನ ಪ್ರತ್ಯುತ್ತರ ಓದಿದ ಕೂಡಲೇ ನನಗೂ ಕೂಡ....ಏನೋ ಅನಿಸಿತು....!! ನನಗೆ ಅನಿಸಿದ್ದು ಏನು ಅನ್ನುವುದನ್ನು ತಿಳಿಯಲು, ನಾನು ಶಾಲೆಯಲ್ಲಿ ಕಲಿತ, ಅಲ್ಲಿ, ಇಲ್ಲಿ, ಗಲ್ಲಿ ಗಲ್ಲಿ ಯಲ್ಲಿ, ಚಿಂದಿ ಪೇಪರ್ ನಲ್ಲಿ ಓದಿದ ಎಲ್ಲ ತರಹದ ಭಾವನೆಗಳಿಗೆ ಹೋಲಿಸಿ ನೋಡಿದೆ...ಯಾವುದಕ್ಕೂ ಹೋಲಿಕೆ ಬರಲಿಲ್ಲ...!! ಒಟ್ಟಿನಲ್ಲಿ....ಅನಿಸಿತು!

ಇಂತಹ ಸ್ನೇಹಭರಿತ(!!) ಪತ್ರವನ್ನ ಓದಿದ ಮೇಲೆ, ದೇವರು ಇಂತಹ ಸ್ನೇಹಿತರನ್ನೂ ಸೃಷ್ಟಿ ಮಾಡಿದ...ಯಾಕೋ!!? ಎಂಬ ಪ್ರಶ್ನೆ ಅಪ್ರಯತ್ನಪೂರ್ವಕವಾಗಿ ಉದ್ಭವವಾಗಿ...ಉತ್ತರ ತಿಳಿಯಲಾಗದೆ ಉದ್ವೇಗಗೊಂಡಿದ್ದೇನೆ.

ವಿ. ಸೂ :-
ಉದ್ವೇಗ -> ಕನ್ನಡದಲ್ಲಿ ಇದಕ್ಕೆ 'ಟೆನ್ಶನ್' ಎನ್ನುತ್ತಾರೆ! ಹಾಗೂ 'ಉದ್ಭವ' ಎಂಬುದಕ್ಕೆ 'Raise' ಎನ್ನುತ್ತಾರೆ.

ಪ್ರತಿ ತಿಂಗಳ ಶುರುವಾತಿಗೆ, ನನ್ನ ಬ್ಯಾಂಕ್ ಖಾತೆಗೆ ಸರಿಯಾಗಿ 3 ದಿನ ತಡವಾಗಿ ನಮ್ಮ ಕಂಪೆನಿಯವರು, ನಾಯಿಗೆ ಹಾಕುವ ಬಿಸ್ಕೆಟ್ ತರಹ ಸ್ವಲ್ಪ ದುಡ್ಡು ಎಸೆಯುತ್ತಾರೆ...(ಮತ್ತೊಮ್ಮೆ ಮೊದಲೆರಡು ಶಬ್ದ ಓದು 'ಪ್ರತಿ ತಿಂಗಳು' - ಯಾಕೆಂದರೆ ಇದು ಪ್ರತಿ ತಿಂಗಳ ನಾಟಕ, ಪ್ರತಿಯೊಬ್ಬ ಕೆಲಸಗಾರರ ಪಗಾರವನ್ನ(ನೂರಾರು ಕೋಟಿಗಳಲ್ಲಿದೆ) 3 ದಿನ ತಡೆಹಿಡಿದರೆ ಅವರಿಗೆ ಎಷ್ಟು ಬಡ್ಡಿ ಬರುವುದೋ ಏನೋ..ದೇವರೇ ಬಲ್ಲ!). ಆ ಬಿಸ್ಕೆಟ್ ನಲ್ಲಿ 4 ನೆ ದಿನ ನಾನು ಯಾರಿಗೆ ಎಸ್ಟ್ ಹಂಚಬೇಕು ಎಂದು ಲೆಕ್ಕ ಹಾಕುವುದರಲ್ಲಿ ಕ್ರೆಡಿಟ್ ಕಾರ್ಡಿನವರು ಅರ್ಧ ಬಿಸ್ಕೆಟ್ ತಿಂದು ಮುಗಿಸುತ್ತಾರೆ...ಉಳಿದ ಅರ್ಧ ದಲ್ಲಿ...ನಾನು ತಿಂದು ಉಳಿದವರಿಗೆ ನಾನೂ ಹಂಚಲೂ ಬಹುದಾ ಎಂಬ ಬಹುಜನರ, ಬಹುಮತದ ಎಲ್ಲರೂ ಅನುಮೋದಿಸುವ ಸಮಸ್ಸ್ಯಾಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೆ. ನನ್ನ ಹೊಟ್ಟೆಯ ಚಿಂತೆಯನ್ನೂ ಮಾಡದೆ, ನಿನ್ನ ಜೊತೆಗೆ ನನ್ನ ಮನೆಯನ್ನು (ತಿರುಗಿಸಿ ಓದಿದರೆ ಚೆನ್ನ ಅನಿಸುತ್ತದೆ :) ) ಹಂಚಿಕೊಂಡಿರುವ ಪ್ರೀತಿಗೆ (!!) ಹಾಗೂ ನಿನ್ನ ಸಹಬಾಡಿಗ ನಾಗಿ ಬಾಡಿಗೆ ಯನ್ನು ಕೊಡಲೇಬೇಕಾದ ಅನಿವಾರ್ಯ ಧ(ಕ)ರ್ಮ ಕ್ಕೆ ಅಳಿದುಳಿದ ತುಂಡನ್ನು ನಿನಗೆ ರವಾನಿಸುತ್ತೇನೆ. (ಇಸ್ಟೆಲ್ಲಾ ಬರೆಯುತ್ತಿರಬೇಕಾದರೆ ಮತ್ತೆ ಮತ್ತೆ ನನಗೆ ಏನೋ ಸಂಕಟ ದ ಅನುಭವವಾಗುತ್ತಿದೆ!!)

ವಿ. ಸೂ :- ಪಗಾರ -> ಅಂದರೆ ಕನ್ನಡದಲ್ಲಿ 'ಸ್ಯಾಲರಿ' ಎಂದು ಕರೆಯುತ್ತಾರೆ!

ನೀನು ಚಂದೀಘಡದಿಂದ ಬೆಂಗಳೂರಿಗೆ ಬರುವ ವರೆಗೆ ನಾವೆಲ್ಲಾ ಸ್ನೇಹಿತರು ಇಲ್ಲಿಯೇ (ಬೆಂಗಳೂರಿನಲ್ಲಿ) ತಳ ಊರಿ 2.5 ವರ್ಷವಾಗಿತ್ತು....ಇವತ್ತಿಗೆ ಸರಿ ಸುಮಾರು 5 ವರ್ಷಗಳಾಗುತ್ತವೆ. ನಮ್ಮ ಗುಂಪಾದ D.C.H ಎಲ್ಲ ಕೂಡಿ ನಾವು ರೆಡ್ಡಿ ಹಾಸ್ಟೆಲ್ನಲ್ಲಿ ಕಳೆದ ದಿನಗಳ ...ಹಾಗು, ನಾನು ನನ್ನ ಇನ್ನಿಬ್ಬರು ಗುಂಪಿನ ಸ್ನೇಹಿತರ ಜೊತೆ ನಾವು ಕರ್ನಾಟಕ ಯುನಿವೆರ್ಸಿಟಿ ಯಲ್ಲಿ ಕಳೆದ ದಿನಗಳ ನೆನಪಿನ ಮೆಲುಕು ಹಾಕುತ್ತ 5 ವರ್ಷ ಕಳೆದದ್ದು ಗೊತ್ತೇ ಆಗಲಿಲ್ಲ...!(ಈಗೀಗ ನಾವೆಲ್ಲಾ ಸೇರಿದಾಗ ತಲೆ ಬಿರಿಯುವ ಹಾಗೆ ವಿಚಾರ ಮಾಡುವ ಮಗದೊಂದು ಪ್ರಶ್ನೆ "ಈ 5 ವರ್ಷ ನಾವೆಲ್ಲಾ ಇಲ್ಲಿ ಸಾಧನೆ ಮಾಡಿದ್ದು (---ಕೊಂಡಿದ್ದು) ಏನೂ?" ಎಂಬ ಮತ್ತೊಂದು ಯಕ್ಷಪ್ರಶ್ನೆಗೆ ಉತ್ತರದ ಹುಡುಕಾಟ ಜಾರಿಯಲ್ಲಿದೆ.).

ನನ್ನ ಈ ಹೊಸ ಕಂಪನಿ ಸೇರಿದ ಮೇಲೆ ನನಗೆ ಕಂಪೆನಿಯವರು ನನ್ನ ಕಾಲಿಗೆ ಚಕ್ರಗಳನ್ನ ಕಟ್ಟಿಬಿಟ್ಟರು ಹಾಗಾಗಿ ನಾನು ಅಲ್ಲಿ ಇಲ್ಲಿ ಓಡುತ್ತಲೇ ಇದ್ದೇನೆ. ಮೊದಲಿಗೆ ನಾನು ಬೆಂಗಳೂರಿಗೆ ಬಂದಾಗ ಯಾವುದಾದರು ಒಬ್ಬ ಗುಂಪಣ್ಣ ನ (ನಮ್ಮ ಗುಂಪಿನ ಸದಸ್ಸ್ಯ) ಜೊತೆ ಇರುತ್ತಿದ್ದೆ ಕಾಲ ಬದಲಾಗಿ ಈಗ ಇಸ್ಟೆಲ್ಲಾ ಕಥೆಯ ತಿರುವುಗಳಲ್ಲಿ (ಯಾವ ಕಥೆ ಹಾಗೂ ಯಾವ ಯಾವ ತಿರುವುಗಳು ಎನ್ನುವುದರ ಬಗ್ಗೆ ಮತ್ತೊಮ್ಮೆ ಹೇಳುತ್ತೇನೆ) ಒಬ್ಬೊಬ್ಬರು ಒಂದೊಂದು ಮನೆ(!) ಸೇರಿಕೊಂಡ ಮೇಲೆ, ಹಾಗೂ ನಾನು ಬೆಂಗಳೂರಿಗೆ ಬಂದಾಗ ಸ್ವಲ್ಪ ದಿನದ ಮಟ್ಟಿಗೆ ಬಿದ್ದುಕೊಳ್ಳಲು ಸ್ವಲ್ಪ ಜಾಗೆಯ ಅವಶ್ಯಕತೆಯನ್ನ ಮನವರಿಕೆ ಮಾಡಿಕೊಂಡು, ನಿನ್ನ ಜೊತೆ ಸುಂದರವಾದ (ಸುಂದರವಾಗಿದ್ದ--!! ) ಬಸವನಗುಡಿ ಎಂಬ ಊರಿನಲ್ಲಿ, ಶಾಂತಿಯಿಂದರಲು(!!) ನಾವಿಬ್ಬರೂ ಸೇರಿ ಆಯ್ಕೆ ಮಾಡಿಕೊಂಡ ಮನೆಗೆ ಬಾಡಿಗೆ ಕೊಡಲೇಬೇಕಾದ ಸಂತಸವನ್ನ ನಾನು ಅದಾವ ಸುಂದರ ಶಬ್ದಗಳಿಂದ ವರ್ಣಿಸಲಿ..? ತಿಳಿಯುತ್ತಿಲ್ಲ...

ನಾವುಗಳು ಕತ್ತೆಯಂತೆ (ಪಾಪದ ಕತ್ತೆಗೆ ಹೊಲಿಸಬೇಕ ನಾವು) ದುಡಿಯುವುದು ನಮ್ಮ ಮಾವಂದಿರ ಕಚೇರಿಯಾಗಿರದೆ ಇರುವುದರಿಂದ, ಸಣ್ಣ ಪುಟ್ಟ (ಬರಿ ಮಾತಿಗೆ 'ಸಣ್ಣ ಪುಟ್ಟ' ಬಳಸಿದ್ದನ್ನು ಅರ್ಥ ಮಾಡಿಕೊಳ್ಳಬೇಕು) ರಾಜಕಾರಣ ಹಾಗೂ ರಾಜಕಾರಣಿಗಳು ಇದ್ದೆ ಇರುತ್ತ ವೆ/ರೆ. ಹೀಗಾಗಿ ನೀನು ಯಾವುದನ್ನು ಮನಸಿನಲ್ಲಿ ಇಟ್ಟುಕೊಳ್ಳದೆ, ಬರಿ ೧೮ ಘಂಟೆ ಕೆಲಸ ಮಾಡಿದರೆ ಸಾಕು ಎನ್ನುವುದು ನನ್ನ ಅನಿಸಿಕೆ.

ವಿ ಸೂ :- 'ಕಚೇರಿಗೆ' ಕನ್ನಡದಲ್ಲಿ 'ಆಫೀಸ್' ಎಂಬ ಅರ್ಥವೂ ಇದೆ.

ನಮ್ಮ ದೇಶದಲ್ಲಿ ಸಂಪನ್ಮೂಲಗಳ ಕೊರತೆ ಇರದೇ ಇರುವುದರಿಂದ...ಆದರೆ ಸಂಪನ್ಮೂಲಗಳು ಬೇರೆಯವರಿಗೆ ಹಾಗೂ ಬೇರೆ ದೇಶಗಳಿಗೆಲ್ಲ ಉಪಯೋಗವಾಗಲಿ ಎಂದು ನಾವು ಉದಾರ ಮನಸಿನಿಂದ ಅವುಗಳನ್ನ ಬೇರೆಯವರಿಗೆ ಕೊಟ್ಟು ಬದುಕುತ್ತೇವೆ ಯಾದ್ದರಿಂದ ವಿದ್ಯುತ್ ಶಕ್ತಿಯ ಪೂರೈಕೆ ತುಂಬಾ ಉತ್ತಮ ಗುಣಮಟ್ಟದಲ್ಲಿದೆ. ಇದು ನಿನಗೆ ತಿಳಿಯದ ವಿಚಾರವೇನಲ್ಲ. ಸಂಭಾಳಿಸಿಕೊಂಡು ಹೋಗು.

ವಿ ಸೊ :-
ಸಂಭಾಳಿಸಿಕೊಂಡು ಹೋಗುವುದು ಎಂದರೆ ಕನ್ನಡದಲ್ಲಿ 'ಕಾಂಪ್ರೋಮೈಸ್' ಎಂದು ಅರ್ಥ.

ಮುಬೈಯಂಥಹ ಘಟನೆಗಳು ನಮಗೆ, ನಮ್ಮ ಜನಕ್ಕೆ, ನಮ್ಮ ಸರಕಾರಕ್ಕೆ, ನಮ್ಮ ನಾಯಿಗಳಿಗೆ, ಬೆಕ್ಕುಗಳಿಗೆ, ಇಲಿಗಳಿಗೆ ..ಒಟ್ಟಿನಲ್ಲಿ ಭಾರತದ ಪ್ರತಿ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಜಂತು, ಹುಳು ಇವೆಲ್ಲವಕ್ಕೆ ಹೊಸದೇನಲ್ಲ. ಹಾಗೂ, ಜಗತ್ತಿನಲ್ಲಿ ಯಾವ ಜೀವಿಯ ಜೀವನವೂ/ಜೀವವೂ ಮಹಾನ್ ಏನಲ್ಲ. ಹುಟ್ಟಿದ ಎಲ್ಲವು ಸಾಯಲೇಬೇಕು, ಹೀಗಾಗಿ ಇಂಥಹ ಕ್ಷುಲ್ಲಕ ವಿಷಯಗಳ ಬಗ್ಗೆ ಪತ್ರದಲ್ಲಿ ಬರೆಯಬೇಡ. ಕಸಬ್ ನಂತಹ ಮಹಾನ್ ವ್ಯಕ್ತಿಗಳು ನಮ್ಮ ರಾಜಕೀಯ ಪಕ್ಷಗಳಿಗೆ ಮಾದರಿಯಾಗುವ ಸಮಯ ಬಂದಿದೆ, ಹೀಗಾಗಿ ಅವರೆಲ್ಲ ಅದೇ ದಾರಿಯಲ್ಲಿ ನಡೆಯುವ ಪ್ರಮಾಣ ವಚನ ಸ್ವೀಕರಿಸಿದ್ದರೆಂಬ ಸುದ್ದಿ ನಿನಗೆ ಗೊತ್ತಿಲ್ಲದ್ದೇನಲ್ಲ!. ಯಾವುದೇ ಪಕ್ಷ ಈ ದಾರಿಯಲ್ಲಿ ನಡೆಯದೇ, ಅಭಿವೃದ್ದಿಯ ಕಡೆ ಗಮನ ಕೊಡುತ್ತದೋ ಅಂತಹ ಪಕ್ಷವನ್ನ ಅಥವಾ ವ್ಯಕ್ತಿಯನ್ನ ನಾವು ಆರಿಸಿ ಕಳಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನ ನಮ್ಮ ದೇಶದ ಮತದಾರ (ಭಾಂದವರು) ಮಾಡ್ಬೇಕು ಅಥವಾ ಮಾಡಬಹುದು ಎಂಬ ಗುಮಾನಿ ಹರಡಿದೆ, ಇದೂ ಕೂಡ ನಿನಗೆ ಗೊತ್ತಿದ್ದೇ ಇರುತ್ತದೆ. ದಯವಿಟ್ಟು ಚಿಂತಿಸಬೇಡ.

ಸದ್ಧ್ಯಕ್ಕೆ ನಮಗೆಎಲ್ಲ ಮುಕ್ತಿ...(ಯಾವುದದರಿಂದ ಮುಕ್ತಿ ಎಂದು ಕೇಳಬೇಡ.....ಸಾಕಷ್ಟಿವೆ, ಬೇಕಾಗಿದ್ದನ್ನು ಆಯ್ದುಕೋ!) ಸಿಗಲಿ...ಹಾಗೂ, ನಮ್ಮಿಬ್ಬರ ಮನೆ ಬಾಡಿಗೆಯನ್ನು ನೀನೊಬ್ಬನೇ ಕೊಡುವಂತಾಗಲಿ ಎಂದು ಹಾರೈಸುತ್ತ ಈ ಪ್ರತ್ಯುತ್ತರ ಇಲ್ಲಿಗೆ ಮುಗಿಸುತ್ತೇನೆ.

ಇಂತಿ ನಿನ್ನ ಪ್ರೀತಿಯ (ಚಲನಚಿತ್ರವಲ್ಲ!) ಹಾಗೂ ನಂಬುಗೆಯ,
ಮಲ್ಲಿಕಾರ್ಜುನ

ವಿ ಸೂ :-
ನಂಬುಗೆ ಅಥವಾ ನಂಬಿಕೆಗೆ ಕನ್ನಡದಲ್ಲಿ 'trust' ಅಥವಾ faithful' ಎಂದು ಕರೆಯುತ್ತಾರೆ.

ಕೊನೆಯ ಸಾಲು: --> "ವಿ ಸೂ" ಎಂದರೆ 'ವಿಶೇಷ ಸೂಚನೆ' ಎಂದರ್ಥ!!

Friday, June 20, 2008

....!!....



"ಇನ್ನು ಎಷ್ಟು ದೂರ ನಡೀಬೇಕು?" ಕೇಳಿದೆ

ಅರ್ಧ ಹಿಂಡಿ ಹಾಕಿದ ಹಳೆಯ ಕೈವಸ್ತ್ರದಂತೆ ಮುಖವೆಲ್ಲ್ಲ ಬೆವರಿನಿಂದ ಮುಚ್ಚಿ, ಮುಖದ ಮೇಲೆ ಬೀಳುವ ಸೂರ್ಯ ಕಿರಣಗಳು ಮುಖ ಮಿಂಚುವಂತೆ ಮಾಡಿಯೂ ಸಹ ಬೆವರಿನ ಮೂಲಕವೇ ಒಳಸೇರಿ ಮತ್ತಸ್ಟು ಬೆವರು ಸುರಿಸುವ ಹಾಗೆ ಮಾಡುತ್ತಿದ್ದವು. ಎಲ್ಲಿ ನೋಡಿದರೂ ಬೆತ್ತಲೆ ನೆಲ ಮಾತ್ರ...ನಾನು ನಡೀತಾನೆ ಇದ್ದೆ.

"ಹೀಗೆ ನಡೀತಿರು, ಹೇಳ್ತೀನಿ" ಅಂತ ಅಂದಿತು ಧ್ವನಿ.
"ಸರಿ" ಮತ್ತೆ ನಡೆಯಲಾರಂಭಿಸಿದೆ

ಕಬ್ಬಿನವಣ್ಣ ಕರಗಿಸಿದ ಒಲೆಯ ಮೇಲೆ ನೀರು ಚಿಮುಕಿಸಿದೊಡನೆ ನೀರು ಮಾಯವಾಗಿ ಎಲ್ಲ ಆವಿಯಾಗುವ ಹಾಗೆ, ನನ್ನ ದೇಹದ ಒಳಗಿನ ನೀರಿನ ಅಂಶ ಮುಗಿದು, ಬೆವರೂ ಸಹ ಬತ್ತಲಾರಂಭಿಸಿತು. ಅಬ್ಬಾ ನಾನೇ ಕರಗಿದ ಕಬ್ಬಿಣದ ತರಹ ಕುದಿತಿದಿನಾ? ಹಾಗೆ ಅನ್ನಿಸ್ತಿದೆ. ಬರಿ ಆ ಧ್ವನಿಯನ್ನರಸಿ ನಾನು ನಡೆಯುತ್ತಿದ್ದೆನಾ? ನಂಬೋಕಾಗ್ತಾ ಇಲ್ಲ ಆದರೂ ನಡಿತಾ ಇರೋದು ನಾನೇ! ಹೀಗೆ ನಡೀತಾ ಇದ್ರೆ ಬರೋ ಲಾಭನಾದ್ರೂ ಏನು?

ಆಗೋಲ್ಲ ಇನ್ನೊಂದು ಪಾದ ಸಹ ಎತ್ತೊಕಾಗೋಲ್ಲ...
ಹ: ಈ ಥರ ಎಷ್ಟೋ ಸಾರಿ ಅನ್ನಿಸಿದೆ ಆದರೂ ನಡಿತಿದಿಯ...ಸುಮ್ನೆ ನಡಿ ಅಂತು ನನ್ನೆದೆ ಬಡಿತ.

"ಅಯಿತು ಸ್ವಲ್ಪ ನೀರು ಕುಡಿ, ತಗೋ" ಅಂತು ಧ್ವನಿ, ನೋಡಿದ್ರೆ 7 ಚಮಚ ನೀರು ಅಸ್ಟೆ...ಆದರೂ ಅದೇ ಪರಮಾನ್ನ. ನಾನ್ಯಾವಾಗ ನಡೆಯೋಕೆ ಶುರು ಮಾಡ್ದೆ ಅನ್ನೋದೂ ನೆನಪಿಲ್ಲ ನಂಗೆ, ಅಸ್ಟು ದಿನದಿಂದ ನಡಿತಾ ಇದೀನಿ, ಪ್ರತಿಫಲ..!? 7 ಚಮಚ ನೀರು ಹ್ಹ!

"ಹೇ, ನಿಂಗಾದ್ರೂ ನೆನಪಿದ್ದ್ಯ ನಾನ್ಯವಾಗಿಂದ ನಡಿತಾ ಇದೀನಿ ಅಂತ? ಮ್ ಮ್ ..ಎಷ್ಟು ದೂರ, ಯಾವ ದಾರಿ, ಹೇಗೆ, ಎಲ್ಲಿಂದ ಶುರು ಮಾಡಿದೆ, ಎಲ್ಲೆಲ್ಲಿ ಸವೆದೆ, ಎಡವಿದ್ದೆಲ್ಲಿ, ಬಿದ್ದದ್ದೆಲ್ಲಿ, ತೆವಳಿದ್ದೆಲ್ಲಿ, ಮಲಗಿದ್ದೆಲ್ಲಿ.....ಹಾ ನಾನಾ ಇದೂ? ನಾನು ಹೀಗಿದ್ನಾ? ಹೀಗೆ ನಾನು ಇಷ್ಟು ದೂರ
ಬರಬಹುದು ನಿಂಜೊತೆ ಅನ್ನೋ ಕನಸೂ ಕೂಡ ಇರ್ಲಿಲ್ಲ ನಂಗೆ.
ನಿನಗೆ ನೆನಪಿಲ್ದೆ ಏನೂ? ದಾಟಿದ ಪ್ರತಿ ಕಲ್ಲು, ಹಳ್ಳ, ನೆಟ್ಟ ಮುಳ್ಳು, ಸುರಿದ ಬೆವರು, ಬೆವರಿಗೆ ಸೇರಿಕೊಂಡ ನೆತ್ತರು, ಏದುಸಿರು, ದಾಹ, ಪ್ರತಿ ತಿರುವು ನೆನಪಿದೆ ನಂಗೆ. ಮಾತು, ಪ್ರಶ್ನೆ, ನಿನ್ನ ನಿರುತ್ತರ, ನೋಟ, ನಗೆ, ಮೌನ, ನಿಶ್ಯಬ್ಧ...ಹೀಗೆ ಪ್ರತಿ ಒ೦ದು ಕ್ಷಣ ಕೂಡ ನೆನಪಿದೆ.

ಆ ಪ್ರತಿ ಕ್ಷಣಗಳು ಯಾವತ್ತ್ತಿದ್ದರೂ ಮುಗಿಯಲೇಬಾರದು ಅನ್ನೋ ಭಾವನೇನ ನನ್ನಲ್ಲಿ ಮೂಡಿಸಿವೆ. ಯಾಕೋ...ವರ್ತಮಾನಕ್ಕಿ೦ತ ಗತಿಸಿದ ಭೂತಕಾಲವೇ ಮತ್ತೆ ಮರಳಿ ನನ್ನ ಭವಿಷ್ಯವಾಗಿ ಬರಬೇಕು, ಭವಿಷ್ಯ ಮತ್ತೆ ವರ್ತಮಾನವಾಗಿ, ಭೂತಕಾಲವಾಗಿ.....ಹೀಗೇ...ಕರಗಿ, ಆವಿಯಾಗಿ ಮೋಡ ಸೇರಿದರೂ, ತಿರುಗಿ ತಿರುಗಿ ಭೂಮಿಗಿಳಿಯೊ ಮಳೆಯ ಥರ ಮತ್ತೆ ಮತ್ತೆ...................................................................ನೀನು ಕೇಳ್ತಿದ್ದಿಯ ತಾನೆ?"



ಇನ್ನು ಮುಗಿದಿಲ್ಲ... !

Tuesday, February 5, 2008

ಇದು ಕಥೆ ಅಲ್ಲ..!


( ಹೌದು ಇದು ಕಥೆ ಅಲ್ಲ ;-). ನಾನು ಹುಟ್ಟಿ ಬೆಳೆದ ಊರಿಗೆ ಭೇಟಿ ಕೊಟ್ಟಾಗ ನನಗೆ ಸಿಗುವ ನನ್ನ ಸ್ನೇಹಿತರ ಜೊತೆ ನಡೆಯುವ ಸಂಭಾಷನೆಯನ್ನ ಬರೆದಿದ್ದೇನೆ. ಒಂಥರಾ ಇಂಟರೆಸ್ಟಿಂಗ್ ಆಗಿರುತ್ತೆ ಅನ್ಕೊತೀನಿ. ತಲೆಗೆ ಹೊಳೆದಾಗಲೆಲ್ಲ ಬರೆಯುತ್ತೇನೆ. )

ಅಲ್ಲಪಾ ಸಾಹೆಬಾ ಎನ್ ನೀ ಹೇಳೂದ ಅಷ್ಟ ಖರೆ ಅನ್ಕೊಂಡಿ ಅನ ನೀ? ಮಗನ ಬ್ಯಾಸಗ್ಯಾಗ ಒಂದ ಸಲೆ ಇಲ್ಲ ಬಾ ಒಂದ್ 8 ದಿನ ಇರು ಮಗನ ..ಅವನೌನ... ನೀರಿನ ಸಲುವಾಗಿ ೩-೪ ಕಿಲೋಮೀಟರ್ ಅದ್ದ್ಯಾಡಿ ರಾಡಿ ಆಗಿದ್ದು ನೀರ್ ತಂದು ೧೦ ಸಲೆ ಸೋಸಿ ಕುಡದಾಗ ಗೊತ್ತಾಕ್ಕೆತಿ ಮಗನ.

ನಾ ಎಲ್ಲೇ ಇಲ್ಲ ಅಂದ್ನ್ಯೋ ಮಾರಾಯ? ನಾನು ಇ ಕಡೆದಾವ್ನ. ನಾನು ನವಲಗುಂದ ನೀಲಮ್ಮನ ಕೇರಿ ನೀರ್ ಹೊತ್ತೆನ್ ಮಗನ. ನನ್ನನ್ನ ತಕ್ಕಮಟ್ಟಿಗೆ ಅವನ ಸಿಟ್ಟಿನಿಂದ ರಕ್ಷಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದೆ.

ಹುಂ ಗೊತ್ತೈತಿ ತೊಗೊ...ನೀ ಎಷ್ಟ್ ನೀರ್ ಹೊತ್ತಿ ಅಂತ. ಬರೆ ಮನಿಗೆ, ಮನಿ ಮಂದಿಗೆ ನೀರ್ ಕುಡುಸುದ್ ಎನ್ ದೊಡ್ಡ ಕೆಲಸ ಅಲ್ಲ ಮಗನಾ. ಹೊಲದ ಕೆಲ್ಸ ಮಾಡೂ ರೈತರ್ ಮನ್ಯಾಗ 10 ದನ ಕರ ಇರತಾವಲ್ಲ ಗೊತ್ತೈತಿಲ್ಲೋ..? ಮಗನ ಅವರ ಮನಿಯಾಗ ಒಬ್ಬ ಹುಡುಗಾ ಬೆಳಿಗ್ಗಿಂದ ಸಂಜಿ ತನಕ ಬರೆ ನೀರ್ ಹೊರಬೇಕು. ಕಡಿಮಿ ಅಂದ್ರೂ 8 ಕೊಡದ್ದ ಗಾಡಿಲೇ 12 ರೌಂಡ್ ಹೊಡಿತಾರ ಮಗನ ಅವರ್ದ ವಿಚಾರ ಮಾಡಿ ಅನ?
(ನಮ್ಮ ಕಡೆ ಮಳೆಗಾಲ ದಲ್ಲಿ ಬಿಟ್ಟು ಉಳಿದೆಲ್ಲ ಕಾಲಗಳಲ್ಲಿ ನೀರು ತರಲು ಹಾಗು ಬೇಗ ಬೇಗ ಬಹಳಷ್ಟು ನೀರು ತರಲು ಅನುಕೂಲವಾಗಲೆಂದು ೮ ಕೊಡಗಳು ಒಮ್ಮೆಲೇ ಕೂಡುವಂಥ ಒಂದು ತಳ್ಳುವ ಗಾಡಿಯನ್ನು ಮಾಡುತ್ತಾರೆ. ಉತ್ತರ ಕರ್ನಾಟಕದ ಊರುಗಳಿಗೆ ನೀವು ಭೇಟಿ ಕೊಟ್ಟರೆ ಪ್ರತಿ ಮನೆ ಮುಂದೆ ಇಂಥಹ ಗಾಡಿ ಗಳು ನಿಮಗೆ ಸಿಗುತ್ತವೆ. ಮನೆಯಲ್ಲಿ ಏನೇ ಇರಲಿ ಬಿಡಲಿ ಇ ಗಾಡಿ ಮಾತ್ರ Mandatory!)

ಲೇ, ಹೊಳ್ಳ ಮಳ್ಲಾ ನೀ ಅದನ್ನ ಹೊಯ್ಕೊಬ್ಯಾಡ...ನಾ ಅನ್ನುದರ ಏನ್ ಅಂದ್ನೆಪಾ ಈಗ? ಎಲ್ಲ ಖರೆ ಐತಿ ಆದ್ರ ಕಮ್ಮಿ ಇರುದೊಂದು ನೀರು, ಅದೊಂದ ಇಲ್ಲ ಅಂತ ಒಟ್ಟ ಯಾರೋ ಕ್ಲೀನ್ ಆಗಿ ಇರಾಕ್ ಹೋಗ್ಬಾರ್ದನ? ಊರಿಗೆ ಬಂದು ಬಸ್ ಸ್ಟ್ಯಾಂಡ್ ಗೆ ಕಾಲ್ ಇಟ್ಟ್ರ್ ಸಾಕ್ ಬರೆ ಎಲ್ಲೇ ನೋಡಿದ್ರೂ ಎಲಿ ಅಡಕಿ ಉಗಳಿದ್ದ ಕಲೀನ..! ಹೆಜ್ಜಿಗೆ ಒಂದ್ 100 ಗುಟಕ್ಹಾ ಪಾಕೀಟ್ ಸಿಗತಾವು. ಕಾಲ ನೂಸಾಕತ್ತಾವು ಅಂತೆನರ ಕುಂಡರಾಕ್ ಬಸ್ ಸ್ಟ್ಯಾಂಡ್ ನ್ಯಾಗ್ ಹೋದ್ರ ಅಲ್ಲ್ಯೂ ಸೀಟ್ ಮ್ಯಾಲೂ ಹೊಲಸ...! ಅಂದ್ರೇನ್ ನಮ್ಮ ಮಂದಿ ಬುದ್ಧಿ ಎಲ್ಲೇ ಇಟ್ಟಾರಂತ? ಯಾಕಪಾ ಕಸ ಒಂದ ಕಡೆ ಕರೆಕ್ಟ್ ಆಗಿ ಹಾಕಿದ್ರ ದಂಡ ಹಾಕ್ತೆವಿ ಅಥವಾ ಊರ್ ಮುಂದಿನ್ ಕಂಭಕ್ಕ ಕಟ್ಟಿ ಹೋಡಿತೆವಿ ಅಂತೆನರ ಹೇಳ್ಯಾರನ ಇವರಿಗೆ? - ನಾನೂ ಸ್ವಲ್ಪ ಜೋರಾಗಿಯೇ ಹೇಳಿದೆ.


ಹುಂ...ಅದ ಖರೆ ಐತಿ ಬಿಡ. ಸಾಲಿ ಕಲಿರ್ಪಾ, ಸ್ವಲ್ಪರ ಹೊರಗಿನ ಸಮಾಚಾರಾ ಗೊತ್ತಾಕ್ಕೆತಿ. ಹೆಂಗ ಜೀವನ ಮಾಡುದು ಅಂತ ಗೊತ್ತಕೀತಿ ಅಂದ್ರ, ಹಸಿ ಈ ನನ್ ಮಕ್ಕಳ್ಗೆ...ಸಾಲಿಗೆ ಹೋಗೂ ಹುಡುಗರ್ನ ಸಾಲಿ ಬಿಡಸಿ ಕೆಲಸಕ್ಕ ಹಚ್ಚತಾರ. ತಾವಂತೂ ಉದ್ಧಾರ ಆಗುದಿಲ್ಲ, ಮಕ್ಕಳ್ನೂ ಆಗಾಕ್ ಬಿಡುದಿಲ್ಲ. ನೀ ಏನರ ಮತ್ತ ಅವರ್ನ ತಿದ್ದತೇನಿ, ಅವರಿಗೆ ತಿಳಸ್ತೆನಿ ಅಂತ ಹೋದ್ರ ಮುಗೀತ್ ಕಥಿ...!

ಯಾಕ? ಏನ್ ಹೊಡಿತಾರನ ಮಗನ...ಒಟ್ಟ ಅಂದ ಬಿಟ್ಟ..

ಆ...ಹೋಗಿ ನೋಡ್ ಮಗನ, ಗೊತ್ತಾಕ್ಕೆತಿ. ಮಂದಿ ನಡುವ ಮರ್ರ್ಯಾದಿ ತಗದ್ ಬಿಡತಾರ. ಏನಾರಾ ಹೇಳಾಕ್ ಹೋದ್ರ 'ಹೋಗೋ ಮಾರಾಯ ಮೊದಲ ನಿಂದ ನೋಡ್ಕೋ ಆಮೇಲೆ ಹೇಳಾಕ್ ಬರೀ ಅಂತ, ಏನ್ ದೊಡ್ಡ ರಾಜಾ ಇವಾ ಬಂದ್ ಬಿಟ್ಟಾ ಹೇಳಾಕ್. ಅವನೌನ ನಮ್ದ ನಮಗ ಹತ್ತೆತಿ ಅಂಥಾದ್ರಾಗಾ ಬಂದಾನ್ ಇವ. ಸಾಯುದರ್ ಮ್ಯಾಲೆ ಒಂದ್ ಮೆಯುದ್ ಬಿತ್ತಂತ, ಹಂಗ್ ಆತು' ಅಂತಾರ... ಅವಾಗ್ ಏನ್ ಮಾಡಾವ ಹೇಳ ನೀ...ಹ ಹ ಹ ಹ

ಹ ಹ ಹ ಹ ...ಯೆಪ್ಪ...ಬ್ಯಾಡೋ ಸಾವಕಾರ ಏನೂ ಬ್ಯಾಡ ನಂಗ...ನಮಗ ಕ್ಲೀನ್ ಆಗಿ ಇರುದ್ ಐತಿ, ಇರುನಂತ. ಇವರಿಗೆ ಹೇಳಾಕ್ ಹೋಗೀ ಯಾವ್ ಮರ್ರ್ಯಾದಿ ತಕ್ಕೊಂತಾನ? ಏನೋ ಅಂತಾರಲ್ಲ, ಅರ್ಜಿ ಕೊಟ್ಟು ಹೊಡಿಸಿ ಕೊಂಡ್ರಂತ, ಹಂಗಾಕ್ಕೆತಿ...ಹ ಹ ಹ.

ಹುಂ ಅದಕ್ಕ ಹೇಳಿದ್ಯ ನಾ, ಮಂದಿ ವಿಷಯಕ್ಕ ಹೋಗಬ್ಯಾಡ, ನಿನಗೇನು ಬೇಕೋ ಅದನ್ ಅಷ್ಟ ನೋಡ್ಕೋ ಅಂತ...

ಹುಂ...ಖರೆ ಖರೆ. ಯಾರಿಗೆ ಬೇಕ ಇದರ ಸಹವಾಸ. ಆದ್ರ ಮಗನ ನೀ ಇನ್ನು ಸ್ವಲ್ಪ ಕ್ಲೀನ್ ಆಗುದ್ ಕಲಿ ಮಗನ. ಏನ್ ಸಿಟಿ ಗೆ ಬರೆಂಗಿಲ್ಲ, ದೊಡ್ಡ ಊರಾಗ ಇರೆಂಗಿಲ್ಲ ಅಂದ ಕೂಡ್ಲೇ, ಹೆಂಗ ಬೇಕಂಗ ಇರಬೇಕಂತ ಏನರ ರೂಲ್ಸ್ ಮಾಡ್ಯಾರಣ..?

ಈ..ನಾ ಏನ್ ಮಾಡುದೈತಿ ಬಿಡಲೇ ಚೊಲೋ ಅರಬಿ ಹಾಕ್ಕೊಂಡು. ನೀವೆನಪಾ ಬೆಂಗಳೂರಾಗ ಇರಾವ್ರು, ಎ ಸಿ ಆಪಿಸ್ ನ್ಯಾಗ ಕುಂತು ಕೆಲಸ ಮಾಡಾವ್ರು....ನಂದೆನೈತಿ..?

ಝಾಡಿಸಿ ಒದ್ದ್ಯಾ ಅಂದ್ರ ನೋಡ್ ಮಗನ ಈಗ..!?...ಮತ್ತ ನಿಂದ ಹೇಳ್ತೀ ಅಲ್ಲ ನೀ...ಗೊತ್ತಿಲ್ಲನ ನನಗ, ಮಗನ...ವಾರದಾಗ 2 ಸಲೆ ಹುಬ್ಬಳ್ಳಿ ಗೆ ಬರ್ತಿ, ಬಂದಾಗ ಹೆಂಗ ಝಗ ಝಗ ಅಂತಿರ್ತಿ ಅಂತ...ಫುಲ್ ಶೇವ್ ಮಾಡ್ಕೊಂಡು, ಟಕ್ ಇನ್ ಮಾಡ್ಕೊಂಡು, ಶೂ ಹಾಕ್ಕೊಂಡು ಚೈನಿ ಹೊಡಿಯಾಕ್ ಬರ್ತೀ ಮಗನ...ಈಗ ನೋಡಿದ್ರ ಭಾಷನಾ ಮಾಡಾಕತ್ತಾನ್ ಮಗ....

ಹುಂ ಪಾ...ಆತ್ ನಡಿ, ಚೋಲೋತೆಂಗ ಇರತೇನಂತ...ಈಗ ತೆಲಿ ಕೆಟ್ತೆತಿ ನಂದು, ಚಾ ಕುಡಸ್ ನಡಿ.

ಆ ...ಮತ್ತ ನಂಗ ಟೋಪಿಗಿ ಹಾಕಾಕ್ ಬರ್ತಿಯಾ ಮಗನ...ನಾ ಚಾ ಕುಡಸ್ ಬೇಕಂತ...ಮಗನ...ನಡಿ ಮೊದಲ ಹೋಗುನು....ಹಂಗ ಬಸ್ ಸ್ಟ್ಯಾಂಡ್ ನ್ಯಾಗ, ನಮ್ಮ ಸೈದ್ಯಾ ಇರತಾನ ಅವನ್ನು ಕರಕೊಂಡು ಹೊಗೂನಂತ.

ಏನ್ ನೀ ಏನ್ ಬಿಟ್ರು ನಿಮ್ಮ ಚಡ್ಡಿ ದೋಸ್ತ ಸೈದು ಸಾಬನ್ ಮಾತ್ರ ಬಿಡುದಿಲ್ಲ ನ ನೀ...ಭಾರಿ ದೋಸ್ತಿ ನಾ ನಿಮ್ದೂ...
ಆದರೂ ತಂದೆ, ಈ ನವಲಗುಂದ ಬಸ್ ಸ್ಟ್ಯಾಂಡ್ ನ್ಯಾಗ ಹೊಗಾಕ್ ರೆಡಿ ಅಡಿ ಅಂದ್ರ ಧೈರ್ಯ ಮೆಚ್ಚಬೇಕ ನಿಂದು...ಭೇಷ್ ಮಗನ...


ಏನ್ ಮಾಡುದ್ಪಾ ಆ ಸೈದ್ಯ ಅಲ್ಲೇ ಅಂಗಡಿ ಹಾಕ್ಕೊಂಡು ಕುಂತಾನಲ್ಲ ಏನ್ ಮಾಡುದು. ಒಂದ್ ಮೊಬೈಲ್ ಏನೋ ಇಟ್ಕೊಂದಾನ ಆದ್ರ ಯಾವಾಗ್ ನೋಡಿದ್ರೂ ನಾಟ್ ರೀಚೆಬಲ್ ಅಂತ ಹೊಯ್ಕೊಂತೆತಿ. ನಡಿ ಕರಕೊಂಡು ಹೋಗುನು ಚಾ ಕುಡಿಯಾಕ. ನೀ ಹೇಳ್ದಂಗ ನಾನ ಚಾ ಕುಡಸ್ ತೆನಿ, ಬಿಲ್ ಅಷ್ಟ ನೀ ಕೊಡಾಕೆಂತ..... ಹ ಹ ಹ ಹ ಹ ...


ಲೇ ಲೇ ...ಪಗಾರದ್ ರೊಕ್ಕ ಎಲ್ಲಿಡ್ತಿರೋ...ಒಂದ ಚಾ ಕುಡಸಾಕ್ ಇಷ್ಟ ಹೊಯ್ಕೊಲ್ಲಾಕತ್ತಿ ಅಲ್ಲ...ನಿಮ್ಮಂಗೆನರ ಇದ್ದಿದ್ರ ದೊಡ್ಡ ಪಾರ್ಟೀ ನ ಕೊಡಿಸಿ ಬಿಡ್ತಿದ್ದ್ಯಾ ನಾ...

ಈಗ ಏನ್ ಕಮ್ಮಿ ಆಗೆತೋ ಮಂಗ್ಯಾನಕೆ ನಿನಗ..? 60 ಎಕರೆ ಹೊಲ ಅದಾವು, ಬಂದ ರೊಕ್ಕ ಏನ್ ಬರೆ ಹುಬ್ಬಳ್ಳಿಗೆ ಹೋಗಿ ಚಾಕಲೇಟ್ ನೋಡಕೊಂತನ ಖರ್ಚ ಮಾಡ್ತಿ ಏನ್ ಮಗನ...ಯಾವಾಗ್ ನೋಡಿದ್ರೂ ಅಳೂದ ಆತು...ನಡಿ ನಡಿ

-------------------------------------------------------------------------------------------------

ಓ ಜನಾಬ್, ಸಲಾಂ ಅಲೈಕುಂ ಜಿ ಬಾ... ಸಬ್ ಖೈರಿಯತ್ತ..? ಆತೆ ಕ್ಯಾವೋ ಚಾ ಪೀನೆಕೋ?

ಓ....ಸಲಾಂ ಜಿ ಬಾ...ಹ ಹ ಹ ....ಭಾರಿ ಆತಲ್ಲೇ...ಯಾವಾಗ್ ಬಂದೀ? ಹ ಹ ..ಸ್ಮಾರ್ಟ್ ಕಾಣಾಕುಂತಿ ಅಲ್ಲ...ಎನಲೇ ಫೋನಾ ಮಾಡಿಲ್ಲ....ಬಾ ಲೇ ಒಳಗ...ಅಂಗಡಿ ನೋಡಬಾ, ಈಗ ಹೆಂಗ ಆಗೆತಿ ನೋಡ್ ಈಗ...

ಥೂ ಅವನೌನ...ಯೆಪ್ಪ..ನಿನ್ನ ಅಂಗಡಿ ಏನ್ ಹೊಸಾದನ ಮಗನ ನನಗ...ಶುರು ಆದಾಗಿಂದ ನೋಡಾಕತ್ತೆನಿ ಅದನ್ನ, ಏನ್ ಹೊಸಾದು...ಬಂದ ಕೂಡ್ಲೇ question ಮ್ಯಾಗ question ಶುರು ಹಚಕೊಂಡ ಬಿಟ್ಟ...ಹುಂ ..ಬಾ ಹೊರಗ, ಅಂಗಡಿ ಅಂತೂ ಬಂದ್ ಮಾಡುದಿಲ್ಲ, ಯಾರರ ಅದಾರಿಲ್ಲೊ ಕುಂದರಾಕ? ಬಾ ಚಾ ಕುಡದ ಬರುನಂತ...ಗೌಡ್ರೂ ಬಂದಾರ ಇಲ್ಲೇ...


ನಮಸ್ಕಾರ್ರಿ ಗೌಡ್ರ, ಏನ್ ಈ ಕಡೆ ಬರೂದ ಇಲ್ಲ...ಹಂಗಲ್ಲೇ..ಕ್ಲೀನ್ ಇರೆಂಗಿಲ್ಲ ...ಕ್ಲೀನ್ ಇರೆಂಗಿಲ್ಲ ಅಂತಿರ್ತಿ ಅಲ್ಲ...ಮಸ್ತ್ ಇಟ್ತೆನಿ ನೋಡ್ ಈಗ ಅಂದ್ಯ...ಹೊಸ ಫ್ರಿಜ್ ತಂದೆನಿ, ನೋಡೆರ ನೋಡಬಾ. - ನನಗೂ ಹಾಗು ನನ್ನ ಗೆಳೆಯನಿಗೂ ಇಬ್ಬರಿಗೂ ಒಂದೇ ಸಾಲಿನಲ್ಲಿ ಉತ್ತರ ಅವನದು. ಯಾವಾಗಿದ್ರು ಹಾಗೇನೇ.


ನಮ್ಮ ಗೌಡರ ಮಾತು ಶುರು ಆದವು.. - ಎ ಏನ್ ಬಂದಾಗ್ ಅಂಗಡ್ಯಾಗ ಇರಾವ್ರ್ಗತೇನ ಹೇಳ್ತಾನ...ಬಸ್ ಸ್ಟ್ಯಾಂಡ್ ನ್ಯಾಗ ಯಾವರ ಚಾಕಲೇಟ್ ಚೊಲೋ ಕಂಡ್ರ ಸಾಕ, ಹಿಂದ ಹಿಂದ ಅವರ ಊರಿಗೆ ಹೋಗಿ ಬಿಡ್ತೀ...ಮತ್ತ ನಾ ಬರುದಿಲ್ಲಂತ ಈ ಕಡೆ....ಬಾ ಬಾ ...


ಹೇ...ನಮ್ಮ ದಾದ ಬಂದಾನ, ನೀ ಏನೇನರ ಹೇಳಿ ಬೈಸ್ ಬ್ಯಾಡ ನಂಗ...ಇಲ್ಲ ಲ ಲೇ ದಾದಾ, ಸುಮ್ನ ಹೇಳ್ತಾನ ಅವಾ. ಏನ್ ಗೌಡರ್ದನ ಈಗ ಪಾರ್ಟೀ...?


(ಮುಂದುವರೆಯುದು :-) )

Monday, November 26, 2007

---ಆರ್ತ---




ಏ ಬಾರೊ, ಈ ಕಡೆ ಬಾರೊ...ಏನು ಆಗಲ್ಲ ಸುಮ್ಮನೆ ಒ೦ದು jump ಮಾಡು, ಏನೂ ಆಗಲ್ಲ...! ಹೆ ನೀನ್ ಆಕಡೆ ಹೊಗ್ಬೆಡ....ಲೇಯ್ ಸುಮ್ಮನಿರೊ ಅವನು ಬರ್ತಾನೆ, ಅವ೦ಗೇನು ತಿಳಿಯೊದಿಲ್ಲ ಅನ್ಕೊಡಿದ್ದಿಯಾ...ಥು...ಸುಮ್ನಿರ್ರೊ.....!

ಬೆ೦ಕಿಯ ಸದ್ದು ಎಲ್ಲವನ್ನು ನು೦ಗುತ್ತಿತ್ತು...... ಅದೊ೦ದು ತರ ವ್ರತ್ತಕಾರದ ಬೆ೦ಕಿ ಜಾಸ್ತಿ ಏನಿಲ್ಲ ಒಬ್ಬನೆ ಒಬ್ಬ ಒಳಗಡೆ ಸಿಕ್ಕಿ ಹಾಕಿಕೊ೦ಡಿದ್ದ...ಎಲ್ಲರಿಗೂ ಬೇಕಾದವನು ಅವನು ಆದರಿ೦ದ ಅವನ ಸ್ನೇಹಿತರೆಲ್ಲ ಕೂಡಿ ಅವನನ್ನು ರಕ್ಷಿಸಲು ಜಗ ಸಾಹಸ ಮಾಡುತ್ತಿದ್ದರು, ಅಥವ ಮೂರನೆಯ ಕಡೆ ನಿ೦ತು ನೊಡುವವರಿಗೆ ಹಾಗೆ ಕಾಣುತ್ತಿತ್ತು.

ಅಯ್ಯೊ ನನ ಮಗ ಹೆಳ್ದೆ ಅವ೦ಗೆ ಅದ್ರೊಳ್ಗಡೆ ಹೊಗ್ಬೆಡ ಸುಟ್ಕೊ೦ತಿಯ, ಸುಮ್ನೆ ಯಾಕ್ ಕಿರಿಕಿರಿ, ಯಾಕ್ ಅರ್ಜಿ ಕೊಟ್ತು ಹೊಡಿಸ್ಕೊ೦ತಿಯ ಲೆ ! ಅವನಜ್ಜಿ ಕೇಳ್ಳೆ ಇಲ್ಲ....ಅನುಭವಿಸ್ತಿದಾನೆ ನನ್ ಮಗ ಅನುಭವಿಸ್ಲಿ ಬಿಡು. waste ನನ್ ಮಗ....ಒ೦ದು ಕತ್ತರಿ ಹಾಕೊ idea ಕೊಟ್ತು, ಅದು ಗೆಲ್ದೆ ಇದ್ರೆ ಅದನ್ನ ಕೇಳ್ದೊರನ್ನ ಹರ್ಕೊ೦ಡು ತಿನ್ನೊ ತರ ಇತ್ತು ಅವನ ನೊಟ!

ಅಯ್ಯೊ ಲೆ ಸುಮ್ನಿರೊ ಎನ್ ಬೆ೦ಕೀನೇ ಕಾನ್ದೆ ಇರೊ ಅ೦ಟಾರ್ಟಿಕ ಖ೦ಡ ನೀನು....ಮಗನೆ. ಗೊತ್ತಿಲ್ಲ್ವ ನಿ೦ಗೆ ಬರೀ ಬೆ೦ಕಿ ಹಚ್ಚೊದಸ್ಟೆ ಗೊತ್ತು, ಅದೂ ಎಲ್ಲಾ ಗೊತ್ತಿದ್ದು, ಗೊತ್ತಿದ್ದು ದೂರದಿ೦ದಾನೆ ನಿ೦ತು ಹಚ್ತಿಯ, ಹಚ್ಚಿ ಮಜಾ ನೊಡ್ತಿಯ. ಮಗನೆ ಬೆ೦ಕಿ ಹಚ್ಚೊರ್ಗೆನೋ ಗೊತ್ತು ಅದರ್ ಬಿಸಿ ಏನೂ ಅ೦ತ. ಸ್ವಲ್ಪ ಮುಚ್ಕೊ೦ಡಿರು ಎನಾರ ಮಾಡೊನ, ನೀನ್ ಅಡ್ದ ಬರ್ಬೇಡ. ಬ೦ದ್ರೆ ಝಾಡ್ಸಿ ಒದಿತಿನಿ....

ಬೆ೦ಕಿ ಅವನ್ನ ಸುಡೋಕಿ೦ತ ಮು೦ಚೆ ಇವ್ನನ್ನೆ ಸುಡೊ ಹಾಗೆ ನೊಡ್ದ ಇನ್ನೊಬ್ಬ...

ಲೆ, ಏನೊ ತಲೆ ಕೆಡಿಸ್ಕೊಬೆಡ, ಇದೇ ನಿನ್ life end ಅಲ್ಲ, ಇನ್ನು ಸಾಕಸ್ಟಿದೆ....ಏನೊ ಗೊತ್ತಿಲ್ದೆ, ಬಿದ್ಬಿಟ್ತಿದಿಯ. ಏನೂ ಅಗಲ್ಲ, ಸ್ವಲ್ಪ ದಿನ ಸುಡ್ತದೆ, ಆಮೆಲೆ ಉರಿ, ೨-೩ ತಿ೦ದಳು ಹೋದ್ರೆ, ಸ್ವಲ್ಪ ಸ್ವಲ್ಪ ಕಲೆ....ಒ೦ದೊ ಎರ್ಡೊ year ಆದ್ಮೇಲೆನಿ೦ಗೆ ಗಾಯ ಆಗಿತ್ತು ಅನ್ನೋದು ಗೊತ್ತಾಗೋಲ್ಲ ಹಾಗಾಗ್ತಿಯ, ಎಲ್ಲಾ ಮರ್ತು ಬಿಡ್ತಿಯ. tension ತೊಗೊಬೆಡ. ನಾನ್ ಹೇಳೊದನ್ನ ಸುಮ್ನೆ ಸ್ವಲ್ಪ ಸರ್ರಿಯಾಗಿ ಕೇಳು....!

ನೊಡೂ.. ಹಿ೦ದೆ ನೊಡೊಕ್ಕೆ ಹೋಗ್ಬೆಡ, ಸುಮ್ಮನೇ ಬರ್ತಾ ಇರು.... ನಿನ್ನ ಮು೦ದೆ, ಹಿ೦ದೆ, ಪಕ್ಕಕ್ಕೆ, ಸುತ್ತ.. ಮುತ್ತ.... ಬೆ೦ಕಿ ಇದೆ ಅನ್ನೋದೂ ಮರ್ತು ಬಿಡು, ಸುಮ್ನೆ ಬರ್ತಾ ಇರು...ಮೊದ್ಲು ಸ್ವಲ್ಪ ನಿಧಾನ್ವಾಗಿ ಬಾ....ಆಮೇಲೆ ಸ್ವಲ್ಪ ಸ್ಪೀಡ್ ಜಾಸ್ತಿ ಇರ್ಲಿ,

ಮ್ ಮ್ ಮ್ ಮ್ ಓಡ್ತಾನೇ ಬ೦ದ್ಬಿಡು, ಆಯ್ತಾ....ನೀನ್ ಅಲ್ಲಿ೦ದ ಪಾರಾಗಿದ್ದೂ ಸಹ ನಿ೦ಗೆ ಗೊತ್ತಾಗೊವಸ್ಟರಲ್ಲಿ ನೀನ್ ಹೊರ್ಗಡೆ ಇರ್ತಿಯ.....ಆಮೇಲೆನು full ಬಿ೦ದಾಸ್ life ಕಣೊ. ಆದ್ರೆ ಅದೇ ಹೆಳಿದ್ನಲ್ಲ tension ತೊಗೊಬೆಡ ಅ೦ತ, ಸುಮ್ನೆ ನೆಗ್ಲೆಚ್ತ್ ಮಾದ್ ಬಿಡ್ಬೇಕು ಅಸ್ಟೆ...! please.... depress ಆಗ್ಬಾರ್ದು ಆಯ್ತಾ? ನಾನ್ ಹೆಲ್ಪ್ ಮಾಡ್ತಿನಿ.

ಲೇಯ್ ತಿಳಿತೆನೋ....ಎಲ್ಲ ಸರಿಯಾಗಿ ಕೇಳಿಸ್ತಾ.....! ಏಯ್ ಸ್ವಲ್ಪ ಯಾರಾದ್ರು ಜೋರಾಗಿ ಕೂಗಿ ಹೇಳ್ರೊ ಅವ೦ಗೆ....! ಲೇಯ್ ಎಲ್ಲಾ ಕೇಳೆಸ್ಕೊ೦ಡ್ಯಾ....ಲೇಯ್.....

ಯಾರ್ಗೂ ಏನೂ ಕೇಳ್ತಾ ಇಲ್ಲ....ಬರಿ ಬೆ೦ಕಿಯ ಸದ್ದು ಅಸ್ಟೆ...
ಯಾಕ್ ಇವ್ರೆಲ್ಲ ಕೂಗಾಡ್ತ ಇದಾರೆ! ಯಾರಿಗೆ ಎನ್ ಆಗಿದೆ ಅ೦ತ..! ಅಯ್ಯೊ ಥೂ ನನ್ ಮಕ್ಳು ನನ್ ಕಡೇನೇ ನೊಡಿ ಕೂಗ್ತಿದಾರೆ....ಸ್ವಲ್ಪ ಆರಾಮಾಗಿ rest ತೊಗೊಳ್ಳೊಕೂ ಬಿಡೊಲ್ಲ ನನ್ ಮಕ್ಳು.

ಏನೂ ಬೆ೦ಕಿನಾ...ಎಲ್ಲಿ..? ಯಾರ್ಗೆ?...ಅಯ್ಯೊ ಇವನಜ್ಜಿ, ಏನ್ ಇನ್ನೂ ನನ್ನನ್ನೇ ನೊಡ್ತಿದಾರೆ....ಬೆ೦ಕಿನಾ? ನನ್ನ ಸುತ್ತಾನಾ....ಹ ಹ ...

ಹಯ್ಯೊ..! ಇಲ್ಲಿ ನೊಡಿದ್ರೆ ಎನ್ ತ೦ಪಿದೇ...you know!?...ಆವಾಗ್ ಆವಾಗಾ ಸ್ವಲ್ಪ ಬಿಸಿ ಅನ್ಸುತ್ತೆ ಆದ್ರೂ, ಎನೋ ಮಜಾ ಅನ್ಸುತ್ತೆ.
ಸುಟ್ಕೊ೦ತೀನಾ...!!?

ಯೆಪ್ಪಾ...ಏನೂ ಆಗಿದೆ ಇವ್ರಿಗೆಲ್ಲ ಅದಕ್ಕೆ ಹೀಗ್ ಮಾಡ್ತ ಇದ್ದರೆ....or ಸುಮ್ನೆ ಕಾಡ್ತ ಇದ್ದಾರೆ ಮಕ್ಳು....!

ಥೂ ಸುಮ್ನೆ ಕಾಡ್ಬೆದ ಹೋಗ್ರೊ....ನನ್ ಮೂಡ್ ಸರಿಯಾಗಿಲ್ಲ ಮೊದ್ಲೇ, ಯಾಕ್ ನನ್ ತಲೆ ತಿ೦ತಿರಾ...? ಬೆ೦ಕಿ ಅ೦ತೆ ಬೆ೦ಕಿ....ಎಲ್ಲಿದೆಯೊ....ಹೆ೦ಗಿದೆಯೊ...? ಯಾರ್ಗೆ ಹತ್ಕೊ೦ಡಿದೆಯೋ..? ಈ ನನ್ ಮಕ್ಳು ನನ್ ಕಡೆ ನೊಡ್ತಾ ಇದಾರೆ.

ಅಯ್ಯೊ ತ೦ದೇ...ನಾನ್ joky mood ನಲ್ಲಿ ಖ೦ಡಿತ ಇಲ್ಲಪ್ಪಾ....ನನ್ ಕೈಲೀ ನಗೋಕೂ ಆಗ್ತ ಇಲ್ಲ....ನಗೋ ಮೂಡೂ ಇಲ್ಲ....ಈಗ ನನ್ನ್ ಸುಮ್ನೆ ಬಿಟ್ ಬಿಡಿ, please ತಲೆ ತಿನ್ಬೆಡಿ....please...I beg you guys....ಯಾಕ್ ಸುಮ್ನೆ ಬೆ೦ಕಿ ಬೆ೦ಕಿ ಅ೦ತ ಚೀರ್ತಾ ಇದ್ದಿರಾ..! ಥೂ...

ನ೦ಗೇನಾಗಿದೆ? ಏನೂ ಇಲ್ಲ....

ಕಣ್ಣು ಉರಿತಾ ಇದ್ದ೦ಗಿದೆ...ಚೆ ಎನ್ ಹೊಗೇನಪ್ಪಾ...ಯಾಕ್ ನನ್ ಕಣ್ಣಲ್ ನೀರು ...ನಾ ನ್...

.....ಅವ್ಳು ಎನೂ ಹೆಳ್ದೇನೇ, ಸುಮ್ ಸುಮ್ನೆ ಹೊಗ್ಬಿಟ್ಲಲ್ಲಾ.... ಅದೇ ನೆನಪು.....!

Monday, September 17, 2007

Die For a While...!



I want to be bemused in the darks filled with null
opining nothing but the unexpressed,
Like a silkworm I want to enshroud myself far away from getting betrayed…!

I want to be lost in the deep of forest averting mysteries of everything that exists everywhere…Listening nothing but euphony of the nature,
I want to die for a while just to relish myself…!

Like a pearl deep inside the ocean, I wish to immerse myself into the harmony of blue-waters…
inducing nothing but the beauty of God,
I want to die for a while, reach undreamt nothing and nowhere…!

I want to die for a while, reach above the skies, enter the world of peace and repose…!

-Mallik