Friday, June 20, 2008

....!!....



"ಇನ್ನು ಎಷ್ಟು ದೂರ ನಡೀಬೇಕು?" ಕೇಳಿದೆ

ಅರ್ಧ ಹಿಂಡಿ ಹಾಕಿದ ಹಳೆಯ ಕೈವಸ್ತ್ರದಂತೆ ಮುಖವೆಲ್ಲ್ಲ ಬೆವರಿನಿಂದ ಮುಚ್ಚಿ, ಮುಖದ ಮೇಲೆ ಬೀಳುವ ಸೂರ್ಯ ಕಿರಣಗಳು ಮುಖ ಮಿಂಚುವಂತೆ ಮಾಡಿಯೂ ಸಹ ಬೆವರಿನ ಮೂಲಕವೇ ಒಳಸೇರಿ ಮತ್ತಸ್ಟು ಬೆವರು ಸುರಿಸುವ ಹಾಗೆ ಮಾಡುತ್ತಿದ್ದವು. ಎಲ್ಲಿ ನೋಡಿದರೂ ಬೆತ್ತಲೆ ನೆಲ ಮಾತ್ರ...ನಾನು ನಡೀತಾನೆ ಇದ್ದೆ.

"ಹೀಗೆ ನಡೀತಿರು, ಹೇಳ್ತೀನಿ" ಅಂತ ಅಂದಿತು ಧ್ವನಿ.
"ಸರಿ" ಮತ್ತೆ ನಡೆಯಲಾರಂಭಿಸಿದೆ

ಕಬ್ಬಿನವಣ್ಣ ಕರಗಿಸಿದ ಒಲೆಯ ಮೇಲೆ ನೀರು ಚಿಮುಕಿಸಿದೊಡನೆ ನೀರು ಮಾಯವಾಗಿ ಎಲ್ಲ ಆವಿಯಾಗುವ ಹಾಗೆ, ನನ್ನ ದೇಹದ ಒಳಗಿನ ನೀರಿನ ಅಂಶ ಮುಗಿದು, ಬೆವರೂ ಸಹ ಬತ್ತಲಾರಂಭಿಸಿತು. ಅಬ್ಬಾ ನಾನೇ ಕರಗಿದ ಕಬ್ಬಿಣದ ತರಹ ಕುದಿತಿದಿನಾ? ಹಾಗೆ ಅನ್ನಿಸ್ತಿದೆ. ಬರಿ ಆ ಧ್ವನಿಯನ್ನರಸಿ ನಾನು ನಡೆಯುತ್ತಿದ್ದೆನಾ? ನಂಬೋಕಾಗ್ತಾ ಇಲ್ಲ ಆದರೂ ನಡಿತಾ ಇರೋದು ನಾನೇ! ಹೀಗೆ ನಡೀತಾ ಇದ್ರೆ ಬರೋ ಲಾಭನಾದ್ರೂ ಏನು?

ಆಗೋಲ್ಲ ಇನ್ನೊಂದು ಪಾದ ಸಹ ಎತ್ತೊಕಾಗೋಲ್ಲ...
ಹ: ಈ ಥರ ಎಷ್ಟೋ ಸಾರಿ ಅನ್ನಿಸಿದೆ ಆದರೂ ನಡಿತಿದಿಯ...ಸುಮ್ನೆ ನಡಿ ಅಂತು ನನ್ನೆದೆ ಬಡಿತ.

"ಅಯಿತು ಸ್ವಲ್ಪ ನೀರು ಕುಡಿ, ತಗೋ" ಅಂತು ಧ್ವನಿ, ನೋಡಿದ್ರೆ 7 ಚಮಚ ನೀರು ಅಸ್ಟೆ...ಆದರೂ ಅದೇ ಪರಮಾನ್ನ. ನಾನ್ಯಾವಾಗ ನಡೆಯೋಕೆ ಶುರು ಮಾಡ್ದೆ ಅನ್ನೋದೂ ನೆನಪಿಲ್ಲ ನಂಗೆ, ಅಸ್ಟು ದಿನದಿಂದ ನಡಿತಾ ಇದೀನಿ, ಪ್ರತಿಫಲ..!? 7 ಚಮಚ ನೀರು ಹ್ಹ!

"ಹೇ, ನಿಂಗಾದ್ರೂ ನೆನಪಿದ್ದ್ಯ ನಾನ್ಯವಾಗಿಂದ ನಡಿತಾ ಇದೀನಿ ಅಂತ? ಮ್ ಮ್ ..ಎಷ್ಟು ದೂರ, ಯಾವ ದಾರಿ, ಹೇಗೆ, ಎಲ್ಲಿಂದ ಶುರು ಮಾಡಿದೆ, ಎಲ್ಲೆಲ್ಲಿ ಸವೆದೆ, ಎಡವಿದ್ದೆಲ್ಲಿ, ಬಿದ್ದದ್ದೆಲ್ಲಿ, ತೆವಳಿದ್ದೆಲ್ಲಿ, ಮಲಗಿದ್ದೆಲ್ಲಿ.....ಹಾ ನಾನಾ ಇದೂ? ನಾನು ಹೀಗಿದ್ನಾ? ಹೀಗೆ ನಾನು ಇಷ್ಟು ದೂರ
ಬರಬಹುದು ನಿಂಜೊತೆ ಅನ್ನೋ ಕನಸೂ ಕೂಡ ಇರ್ಲಿಲ್ಲ ನಂಗೆ.
ನಿನಗೆ ನೆನಪಿಲ್ದೆ ಏನೂ? ದಾಟಿದ ಪ್ರತಿ ಕಲ್ಲು, ಹಳ್ಳ, ನೆಟ್ಟ ಮುಳ್ಳು, ಸುರಿದ ಬೆವರು, ಬೆವರಿಗೆ ಸೇರಿಕೊಂಡ ನೆತ್ತರು, ಏದುಸಿರು, ದಾಹ, ಪ್ರತಿ ತಿರುವು ನೆನಪಿದೆ ನಂಗೆ. ಮಾತು, ಪ್ರಶ್ನೆ, ನಿನ್ನ ನಿರುತ್ತರ, ನೋಟ, ನಗೆ, ಮೌನ, ನಿಶ್ಯಬ್ಧ...ಹೀಗೆ ಪ್ರತಿ ಒ೦ದು ಕ್ಷಣ ಕೂಡ ನೆನಪಿದೆ.

ಆ ಪ್ರತಿ ಕ್ಷಣಗಳು ಯಾವತ್ತ್ತಿದ್ದರೂ ಮುಗಿಯಲೇಬಾರದು ಅನ್ನೋ ಭಾವನೇನ ನನ್ನಲ್ಲಿ ಮೂಡಿಸಿವೆ. ಯಾಕೋ...ವರ್ತಮಾನಕ್ಕಿ೦ತ ಗತಿಸಿದ ಭೂತಕಾಲವೇ ಮತ್ತೆ ಮರಳಿ ನನ್ನ ಭವಿಷ್ಯವಾಗಿ ಬರಬೇಕು, ಭವಿಷ್ಯ ಮತ್ತೆ ವರ್ತಮಾನವಾಗಿ, ಭೂತಕಾಲವಾಗಿ.....ಹೀಗೇ...ಕರಗಿ, ಆವಿಯಾಗಿ ಮೋಡ ಸೇರಿದರೂ, ತಿರುಗಿ ತಿರುಗಿ ಭೂಮಿಗಿಳಿಯೊ ಮಳೆಯ ಥರ ಮತ್ತೆ ಮತ್ತೆ...................................................................ನೀನು ಕೇಳ್ತಿದ್ದಿಯ ತಾನೆ?"



ಇನ್ನು ಮುಗಿದಿಲ್ಲ... !