Tuesday, February 5, 2008

ಇದು ಕಥೆ ಅಲ್ಲ..!


( ಹೌದು ಇದು ಕಥೆ ಅಲ್ಲ ;-). ನಾನು ಹುಟ್ಟಿ ಬೆಳೆದ ಊರಿಗೆ ಭೇಟಿ ಕೊಟ್ಟಾಗ ನನಗೆ ಸಿಗುವ ನನ್ನ ಸ್ನೇಹಿತರ ಜೊತೆ ನಡೆಯುವ ಸಂಭಾಷನೆಯನ್ನ ಬರೆದಿದ್ದೇನೆ. ಒಂಥರಾ ಇಂಟರೆಸ್ಟಿಂಗ್ ಆಗಿರುತ್ತೆ ಅನ್ಕೊತೀನಿ. ತಲೆಗೆ ಹೊಳೆದಾಗಲೆಲ್ಲ ಬರೆಯುತ್ತೇನೆ. )

ಅಲ್ಲಪಾ ಸಾಹೆಬಾ ಎನ್ ನೀ ಹೇಳೂದ ಅಷ್ಟ ಖರೆ ಅನ್ಕೊಂಡಿ ಅನ ನೀ? ಮಗನ ಬ್ಯಾಸಗ್ಯಾಗ ಒಂದ ಸಲೆ ಇಲ್ಲ ಬಾ ಒಂದ್ 8 ದಿನ ಇರು ಮಗನ ..ಅವನೌನ... ನೀರಿನ ಸಲುವಾಗಿ ೩-೪ ಕಿಲೋಮೀಟರ್ ಅದ್ದ್ಯಾಡಿ ರಾಡಿ ಆಗಿದ್ದು ನೀರ್ ತಂದು ೧೦ ಸಲೆ ಸೋಸಿ ಕುಡದಾಗ ಗೊತ್ತಾಕ್ಕೆತಿ ಮಗನ.

ನಾ ಎಲ್ಲೇ ಇಲ್ಲ ಅಂದ್ನ್ಯೋ ಮಾರಾಯ? ನಾನು ಇ ಕಡೆದಾವ್ನ. ನಾನು ನವಲಗುಂದ ನೀಲಮ್ಮನ ಕೇರಿ ನೀರ್ ಹೊತ್ತೆನ್ ಮಗನ. ನನ್ನನ್ನ ತಕ್ಕಮಟ್ಟಿಗೆ ಅವನ ಸಿಟ್ಟಿನಿಂದ ರಕ್ಷಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದೆ.

ಹುಂ ಗೊತ್ತೈತಿ ತೊಗೊ...ನೀ ಎಷ್ಟ್ ನೀರ್ ಹೊತ್ತಿ ಅಂತ. ಬರೆ ಮನಿಗೆ, ಮನಿ ಮಂದಿಗೆ ನೀರ್ ಕುಡುಸುದ್ ಎನ್ ದೊಡ್ಡ ಕೆಲಸ ಅಲ್ಲ ಮಗನಾ. ಹೊಲದ ಕೆಲ್ಸ ಮಾಡೂ ರೈತರ್ ಮನ್ಯಾಗ 10 ದನ ಕರ ಇರತಾವಲ್ಲ ಗೊತ್ತೈತಿಲ್ಲೋ..? ಮಗನ ಅವರ ಮನಿಯಾಗ ಒಬ್ಬ ಹುಡುಗಾ ಬೆಳಿಗ್ಗಿಂದ ಸಂಜಿ ತನಕ ಬರೆ ನೀರ್ ಹೊರಬೇಕು. ಕಡಿಮಿ ಅಂದ್ರೂ 8 ಕೊಡದ್ದ ಗಾಡಿಲೇ 12 ರೌಂಡ್ ಹೊಡಿತಾರ ಮಗನ ಅವರ್ದ ವಿಚಾರ ಮಾಡಿ ಅನ?
(ನಮ್ಮ ಕಡೆ ಮಳೆಗಾಲ ದಲ್ಲಿ ಬಿಟ್ಟು ಉಳಿದೆಲ್ಲ ಕಾಲಗಳಲ್ಲಿ ನೀರು ತರಲು ಹಾಗು ಬೇಗ ಬೇಗ ಬಹಳಷ್ಟು ನೀರು ತರಲು ಅನುಕೂಲವಾಗಲೆಂದು ೮ ಕೊಡಗಳು ಒಮ್ಮೆಲೇ ಕೂಡುವಂಥ ಒಂದು ತಳ್ಳುವ ಗಾಡಿಯನ್ನು ಮಾಡುತ್ತಾರೆ. ಉತ್ತರ ಕರ್ನಾಟಕದ ಊರುಗಳಿಗೆ ನೀವು ಭೇಟಿ ಕೊಟ್ಟರೆ ಪ್ರತಿ ಮನೆ ಮುಂದೆ ಇಂಥಹ ಗಾಡಿ ಗಳು ನಿಮಗೆ ಸಿಗುತ್ತವೆ. ಮನೆಯಲ್ಲಿ ಏನೇ ಇರಲಿ ಬಿಡಲಿ ಇ ಗಾಡಿ ಮಾತ್ರ Mandatory!)

ಲೇ, ಹೊಳ್ಳ ಮಳ್ಲಾ ನೀ ಅದನ್ನ ಹೊಯ್ಕೊಬ್ಯಾಡ...ನಾ ಅನ್ನುದರ ಏನ್ ಅಂದ್ನೆಪಾ ಈಗ? ಎಲ್ಲ ಖರೆ ಐತಿ ಆದ್ರ ಕಮ್ಮಿ ಇರುದೊಂದು ನೀರು, ಅದೊಂದ ಇಲ್ಲ ಅಂತ ಒಟ್ಟ ಯಾರೋ ಕ್ಲೀನ್ ಆಗಿ ಇರಾಕ್ ಹೋಗ್ಬಾರ್ದನ? ಊರಿಗೆ ಬಂದು ಬಸ್ ಸ್ಟ್ಯಾಂಡ್ ಗೆ ಕಾಲ್ ಇಟ್ಟ್ರ್ ಸಾಕ್ ಬರೆ ಎಲ್ಲೇ ನೋಡಿದ್ರೂ ಎಲಿ ಅಡಕಿ ಉಗಳಿದ್ದ ಕಲೀನ..! ಹೆಜ್ಜಿಗೆ ಒಂದ್ 100 ಗುಟಕ್ಹಾ ಪಾಕೀಟ್ ಸಿಗತಾವು. ಕಾಲ ನೂಸಾಕತ್ತಾವು ಅಂತೆನರ ಕುಂಡರಾಕ್ ಬಸ್ ಸ್ಟ್ಯಾಂಡ್ ನ್ಯಾಗ್ ಹೋದ್ರ ಅಲ್ಲ್ಯೂ ಸೀಟ್ ಮ್ಯಾಲೂ ಹೊಲಸ...! ಅಂದ್ರೇನ್ ನಮ್ಮ ಮಂದಿ ಬುದ್ಧಿ ಎಲ್ಲೇ ಇಟ್ಟಾರಂತ? ಯಾಕಪಾ ಕಸ ಒಂದ ಕಡೆ ಕರೆಕ್ಟ್ ಆಗಿ ಹಾಕಿದ್ರ ದಂಡ ಹಾಕ್ತೆವಿ ಅಥವಾ ಊರ್ ಮುಂದಿನ್ ಕಂಭಕ್ಕ ಕಟ್ಟಿ ಹೋಡಿತೆವಿ ಅಂತೆನರ ಹೇಳ್ಯಾರನ ಇವರಿಗೆ? - ನಾನೂ ಸ್ವಲ್ಪ ಜೋರಾಗಿಯೇ ಹೇಳಿದೆ.


ಹುಂ...ಅದ ಖರೆ ಐತಿ ಬಿಡ. ಸಾಲಿ ಕಲಿರ್ಪಾ, ಸ್ವಲ್ಪರ ಹೊರಗಿನ ಸಮಾಚಾರಾ ಗೊತ್ತಾಕ್ಕೆತಿ. ಹೆಂಗ ಜೀವನ ಮಾಡುದು ಅಂತ ಗೊತ್ತಕೀತಿ ಅಂದ್ರ, ಹಸಿ ಈ ನನ್ ಮಕ್ಕಳ್ಗೆ...ಸಾಲಿಗೆ ಹೋಗೂ ಹುಡುಗರ್ನ ಸಾಲಿ ಬಿಡಸಿ ಕೆಲಸಕ್ಕ ಹಚ್ಚತಾರ. ತಾವಂತೂ ಉದ್ಧಾರ ಆಗುದಿಲ್ಲ, ಮಕ್ಕಳ್ನೂ ಆಗಾಕ್ ಬಿಡುದಿಲ್ಲ. ನೀ ಏನರ ಮತ್ತ ಅವರ್ನ ತಿದ್ದತೇನಿ, ಅವರಿಗೆ ತಿಳಸ್ತೆನಿ ಅಂತ ಹೋದ್ರ ಮುಗೀತ್ ಕಥಿ...!

ಯಾಕ? ಏನ್ ಹೊಡಿತಾರನ ಮಗನ...ಒಟ್ಟ ಅಂದ ಬಿಟ್ಟ..

ಆ...ಹೋಗಿ ನೋಡ್ ಮಗನ, ಗೊತ್ತಾಕ್ಕೆತಿ. ಮಂದಿ ನಡುವ ಮರ್ರ್ಯಾದಿ ತಗದ್ ಬಿಡತಾರ. ಏನಾರಾ ಹೇಳಾಕ್ ಹೋದ್ರ 'ಹೋಗೋ ಮಾರಾಯ ಮೊದಲ ನಿಂದ ನೋಡ್ಕೋ ಆಮೇಲೆ ಹೇಳಾಕ್ ಬರೀ ಅಂತ, ಏನ್ ದೊಡ್ಡ ರಾಜಾ ಇವಾ ಬಂದ್ ಬಿಟ್ಟಾ ಹೇಳಾಕ್. ಅವನೌನ ನಮ್ದ ನಮಗ ಹತ್ತೆತಿ ಅಂಥಾದ್ರಾಗಾ ಬಂದಾನ್ ಇವ. ಸಾಯುದರ್ ಮ್ಯಾಲೆ ಒಂದ್ ಮೆಯುದ್ ಬಿತ್ತಂತ, ಹಂಗ್ ಆತು' ಅಂತಾರ... ಅವಾಗ್ ಏನ್ ಮಾಡಾವ ಹೇಳ ನೀ...ಹ ಹ ಹ ಹ

ಹ ಹ ಹ ಹ ...ಯೆಪ್ಪ...ಬ್ಯಾಡೋ ಸಾವಕಾರ ಏನೂ ಬ್ಯಾಡ ನಂಗ...ನಮಗ ಕ್ಲೀನ್ ಆಗಿ ಇರುದ್ ಐತಿ, ಇರುನಂತ. ಇವರಿಗೆ ಹೇಳಾಕ್ ಹೋಗೀ ಯಾವ್ ಮರ್ರ್ಯಾದಿ ತಕ್ಕೊಂತಾನ? ಏನೋ ಅಂತಾರಲ್ಲ, ಅರ್ಜಿ ಕೊಟ್ಟು ಹೊಡಿಸಿ ಕೊಂಡ್ರಂತ, ಹಂಗಾಕ್ಕೆತಿ...ಹ ಹ ಹ.

ಹುಂ ಅದಕ್ಕ ಹೇಳಿದ್ಯ ನಾ, ಮಂದಿ ವಿಷಯಕ್ಕ ಹೋಗಬ್ಯಾಡ, ನಿನಗೇನು ಬೇಕೋ ಅದನ್ ಅಷ್ಟ ನೋಡ್ಕೋ ಅಂತ...

ಹುಂ...ಖರೆ ಖರೆ. ಯಾರಿಗೆ ಬೇಕ ಇದರ ಸಹವಾಸ. ಆದ್ರ ಮಗನ ನೀ ಇನ್ನು ಸ್ವಲ್ಪ ಕ್ಲೀನ್ ಆಗುದ್ ಕಲಿ ಮಗನ. ಏನ್ ಸಿಟಿ ಗೆ ಬರೆಂಗಿಲ್ಲ, ದೊಡ್ಡ ಊರಾಗ ಇರೆಂಗಿಲ್ಲ ಅಂದ ಕೂಡ್ಲೇ, ಹೆಂಗ ಬೇಕಂಗ ಇರಬೇಕಂತ ಏನರ ರೂಲ್ಸ್ ಮಾಡ್ಯಾರಣ..?

ಈ..ನಾ ಏನ್ ಮಾಡುದೈತಿ ಬಿಡಲೇ ಚೊಲೋ ಅರಬಿ ಹಾಕ್ಕೊಂಡು. ನೀವೆನಪಾ ಬೆಂಗಳೂರಾಗ ಇರಾವ್ರು, ಎ ಸಿ ಆಪಿಸ್ ನ್ಯಾಗ ಕುಂತು ಕೆಲಸ ಮಾಡಾವ್ರು....ನಂದೆನೈತಿ..?

ಝಾಡಿಸಿ ಒದ್ದ್ಯಾ ಅಂದ್ರ ನೋಡ್ ಮಗನ ಈಗ..!?...ಮತ್ತ ನಿಂದ ಹೇಳ್ತೀ ಅಲ್ಲ ನೀ...ಗೊತ್ತಿಲ್ಲನ ನನಗ, ಮಗನ...ವಾರದಾಗ 2 ಸಲೆ ಹುಬ್ಬಳ್ಳಿ ಗೆ ಬರ್ತಿ, ಬಂದಾಗ ಹೆಂಗ ಝಗ ಝಗ ಅಂತಿರ್ತಿ ಅಂತ...ಫುಲ್ ಶೇವ್ ಮಾಡ್ಕೊಂಡು, ಟಕ್ ಇನ್ ಮಾಡ್ಕೊಂಡು, ಶೂ ಹಾಕ್ಕೊಂಡು ಚೈನಿ ಹೊಡಿಯಾಕ್ ಬರ್ತೀ ಮಗನ...ಈಗ ನೋಡಿದ್ರ ಭಾಷನಾ ಮಾಡಾಕತ್ತಾನ್ ಮಗ....

ಹುಂ ಪಾ...ಆತ್ ನಡಿ, ಚೋಲೋತೆಂಗ ಇರತೇನಂತ...ಈಗ ತೆಲಿ ಕೆಟ್ತೆತಿ ನಂದು, ಚಾ ಕುಡಸ್ ನಡಿ.

ಆ ...ಮತ್ತ ನಂಗ ಟೋಪಿಗಿ ಹಾಕಾಕ್ ಬರ್ತಿಯಾ ಮಗನ...ನಾ ಚಾ ಕುಡಸ್ ಬೇಕಂತ...ಮಗನ...ನಡಿ ಮೊದಲ ಹೋಗುನು....ಹಂಗ ಬಸ್ ಸ್ಟ್ಯಾಂಡ್ ನ್ಯಾಗ, ನಮ್ಮ ಸೈದ್ಯಾ ಇರತಾನ ಅವನ್ನು ಕರಕೊಂಡು ಹೊಗೂನಂತ.

ಏನ್ ನೀ ಏನ್ ಬಿಟ್ರು ನಿಮ್ಮ ಚಡ್ಡಿ ದೋಸ್ತ ಸೈದು ಸಾಬನ್ ಮಾತ್ರ ಬಿಡುದಿಲ್ಲ ನ ನೀ...ಭಾರಿ ದೋಸ್ತಿ ನಾ ನಿಮ್ದೂ...
ಆದರೂ ತಂದೆ, ಈ ನವಲಗುಂದ ಬಸ್ ಸ್ಟ್ಯಾಂಡ್ ನ್ಯಾಗ ಹೊಗಾಕ್ ರೆಡಿ ಅಡಿ ಅಂದ್ರ ಧೈರ್ಯ ಮೆಚ್ಚಬೇಕ ನಿಂದು...ಭೇಷ್ ಮಗನ...


ಏನ್ ಮಾಡುದ್ಪಾ ಆ ಸೈದ್ಯ ಅಲ್ಲೇ ಅಂಗಡಿ ಹಾಕ್ಕೊಂಡು ಕುಂತಾನಲ್ಲ ಏನ್ ಮಾಡುದು. ಒಂದ್ ಮೊಬೈಲ್ ಏನೋ ಇಟ್ಕೊಂದಾನ ಆದ್ರ ಯಾವಾಗ್ ನೋಡಿದ್ರೂ ನಾಟ್ ರೀಚೆಬಲ್ ಅಂತ ಹೊಯ್ಕೊಂತೆತಿ. ನಡಿ ಕರಕೊಂಡು ಹೋಗುನು ಚಾ ಕುಡಿಯಾಕ. ನೀ ಹೇಳ್ದಂಗ ನಾನ ಚಾ ಕುಡಸ್ ತೆನಿ, ಬಿಲ್ ಅಷ್ಟ ನೀ ಕೊಡಾಕೆಂತ..... ಹ ಹ ಹ ಹ ಹ ...


ಲೇ ಲೇ ...ಪಗಾರದ್ ರೊಕ್ಕ ಎಲ್ಲಿಡ್ತಿರೋ...ಒಂದ ಚಾ ಕುಡಸಾಕ್ ಇಷ್ಟ ಹೊಯ್ಕೊಲ್ಲಾಕತ್ತಿ ಅಲ್ಲ...ನಿಮ್ಮಂಗೆನರ ಇದ್ದಿದ್ರ ದೊಡ್ಡ ಪಾರ್ಟೀ ನ ಕೊಡಿಸಿ ಬಿಡ್ತಿದ್ದ್ಯಾ ನಾ...

ಈಗ ಏನ್ ಕಮ್ಮಿ ಆಗೆತೋ ಮಂಗ್ಯಾನಕೆ ನಿನಗ..? 60 ಎಕರೆ ಹೊಲ ಅದಾವು, ಬಂದ ರೊಕ್ಕ ಏನ್ ಬರೆ ಹುಬ್ಬಳ್ಳಿಗೆ ಹೋಗಿ ಚಾಕಲೇಟ್ ನೋಡಕೊಂತನ ಖರ್ಚ ಮಾಡ್ತಿ ಏನ್ ಮಗನ...ಯಾವಾಗ್ ನೋಡಿದ್ರೂ ಅಳೂದ ಆತು...ನಡಿ ನಡಿ

-------------------------------------------------------------------------------------------------

ಓ ಜನಾಬ್, ಸಲಾಂ ಅಲೈಕುಂ ಜಿ ಬಾ... ಸಬ್ ಖೈರಿಯತ್ತ..? ಆತೆ ಕ್ಯಾವೋ ಚಾ ಪೀನೆಕೋ?

ಓ....ಸಲಾಂ ಜಿ ಬಾ...ಹ ಹ ಹ ....ಭಾರಿ ಆತಲ್ಲೇ...ಯಾವಾಗ್ ಬಂದೀ? ಹ ಹ ..ಸ್ಮಾರ್ಟ್ ಕಾಣಾಕುಂತಿ ಅಲ್ಲ...ಎನಲೇ ಫೋನಾ ಮಾಡಿಲ್ಲ....ಬಾ ಲೇ ಒಳಗ...ಅಂಗಡಿ ನೋಡಬಾ, ಈಗ ಹೆಂಗ ಆಗೆತಿ ನೋಡ್ ಈಗ...

ಥೂ ಅವನೌನ...ಯೆಪ್ಪ..ನಿನ್ನ ಅಂಗಡಿ ಏನ್ ಹೊಸಾದನ ಮಗನ ನನಗ...ಶುರು ಆದಾಗಿಂದ ನೋಡಾಕತ್ತೆನಿ ಅದನ್ನ, ಏನ್ ಹೊಸಾದು...ಬಂದ ಕೂಡ್ಲೇ question ಮ್ಯಾಗ question ಶುರು ಹಚಕೊಂಡ ಬಿಟ್ಟ...ಹುಂ ..ಬಾ ಹೊರಗ, ಅಂಗಡಿ ಅಂತೂ ಬಂದ್ ಮಾಡುದಿಲ್ಲ, ಯಾರರ ಅದಾರಿಲ್ಲೊ ಕುಂದರಾಕ? ಬಾ ಚಾ ಕುಡದ ಬರುನಂತ...ಗೌಡ್ರೂ ಬಂದಾರ ಇಲ್ಲೇ...


ನಮಸ್ಕಾರ್ರಿ ಗೌಡ್ರ, ಏನ್ ಈ ಕಡೆ ಬರೂದ ಇಲ್ಲ...ಹಂಗಲ್ಲೇ..ಕ್ಲೀನ್ ಇರೆಂಗಿಲ್ಲ ...ಕ್ಲೀನ್ ಇರೆಂಗಿಲ್ಲ ಅಂತಿರ್ತಿ ಅಲ್ಲ...ಮಸ್ತ್ ಇಟ್ತೆನಿ ನೋಡ್ ಈಗ ಅಂದ್ಯ...ಹೊಸ ಫ್ರಿಜ್ ತಂದೆನಿ, ನೋಡೆರ ನೋಡಬಾ. - ನನಗೂ ಹಾಗು ನನ್ನ ಗೆಳೆಯನಿಗೂ ಇಬ್ಬರಿಗೂ ಒಂದೇ ಸಾಲಿನಲ್ಲಿ ಉತ್ತರ ಅವನದು. ಯಾವಾಗಿದ್ರು ಹಾಗೇನೇ.


ನಮ್ಮ ಗೌಡರ ಮಾತು ಶುರು ಆದವು.. - ಎ ಏನ್ ಬಂದಾಗ್ ಅಂಗಡ್ಯಾಗ ಇರಾವ್ರ್ಗತೇನ ಹೇಳ್ತಾನ...ಬಸ್ ಸ್ಟ್ಯಾಂಡ್ ನ್ಯಾಗ ಯಾವರ ಚಾಕಲೇಟ್ ಚೊಲೋ ಕಂಡ್ರ ಸಾಕ, ಹಿಂದ ಹಿಂದ ಅವರ ಊರಿಗೆ ಹೋಗಿ ಬಿಡ್ತೀ...ಮತ್ತ ನಾ ಬರುದಿಲ್ಲಂತ ಈ ಕಡೆ....ಬಾ ಬಾ ...


ಹೇ...ನಮ್ಮ ದಾದ ಬಂದಾನ, ನೀ ಏನೇನರ ಹೇಳಿ ಬೈಸ್ ಬ್ಯಾಡ ನಂಗ...ಇಲ್ಲ ಲ ಲೇ ದಾದಾ, ಸುಮ್ನ ಹೇಳ್ತಾನ ಅವಾ. ಏನ್ ಗೌಡರ್ದನ ಈಗ ಪಾರ್ಟೀ...?


(ಮುಂದುವರೆಯುದು :-) )