Monday, November 26, 2007

---ಆರ್ತ---




ಏ ಬಾರೊ, ಈ ಕಡೆ ಬಾರೊ...ಏನು ಆಗಲ್ಲ ಸುಮ್ಮನೆ ಒ೦ದು jump ಮಾಡು, ಏನೂ ಆಗಲ್ಲ...! ಹೆ ನೀನ್ ಆಕಡೆ ಹೊಗ್ಬೆಡ....ಲೇಯ್ ಸುಮ್ಮನಿರೊ ಅವನು ಬರ್ತಾನೆ, ಅವ೦ಗೇನು ತಿಳಿಯೊದಿಲ್ಲ ಅನ್ಕೊಡಿದ್ದಿಯಾ...ಥು...ಸುಮ್ನಿರ್ರೊ.....!

ಬೆ೦ಕಿಯ ಸದ್ದು ಎಲ್ಲವನ್ನು ನು೦ಗುತ್ತಿತ್ತು...... ಅದೊ೦ದು ತರ ವ್ರತ್ತಕಾರದ ಬೆ೦ಕಿ ಜಾಸ್ತಿ ಏನಿಲ್ಲ ಒಬ್ಬನೆ ಒಬ್ಬ ಒಳಗಡೆ ಸಿಕ್ಕಿ ಹಾಕಿಕೊ೦ಡಿದ್ದ...ಎಲ್ಲರಿಗೂ ಬೇಕಾದವನು ಅವನು ಆದರಿ೦ದ ಅವನ ಸ್ನೇಹಿತರೆಲ್ಲ ಕೂಡಿ ಅವನನ್ನು ರಕ್ಷಿಸಲು ಜಗ ಸಾಹಸ ಮಾಡುತ್ತಿದ್ದರು, ಅಥವ ಮೂರನೆಯ ಕಡೆ ನಿ೦ತು ನೊಡುವವರಿಗೆ ಹಾಗೆ ಕಾಣುತ್ತಿತ್ತು.

ಅಯ್ಯೊ ನನ ಮಗ ಹೆಳ್ದೆ ಅವ೦ಗೆ ಅದ್ರೊಳ್ಗಡೆ ಹೊಗ್ಬೆಡ ಸುಟ್ಕೊ೦ತಿಯ, ಸುಮ್ನೆ ಯಾಕ್ ಕಿರಿಕಿರಿ, ಯಾಕ್ ಅರ್ಜಿ ಕೊಟ್ತು ಹೊಡಿಸ್ಕೊ೦ತಿಯ ಲೆ ! ಅವನಜ್ಜಿ ಕೇಳ್ಳೆ ಇಲ್ಲ....ಅನುಭವಿಸ್ತಿದಾನೆ ನನ್ ಮಗ ಅನುಭವಿಸ್ಲಿ ಬಿಡು. waste ನನ್ ಮಗ....ಒ೦ದು ಕತ್ತರಿ ಹಾಕೊ idea ಕೊಟ್ತು, ಅದು ಗೆಲ್ದೆ ಇದ್ರೆ ಅದನ್ನ ಕೇಳ್ದೊರನ್ನ ಹರ್ಕೊ೦ಡು ತಿನ್ನೊ ತರ ಇತ್ತು ಅವನ ನೊಟ!

ಅಯ್ಯೊ ಲೆ ಸುಮ್ನಿರೊ ಎನ್ ಬೆ೦ಕೀನೇ ಕಾನ್ದೆ ಇರೊ ಅ೦ಟಾರ್ಟಿಕ ಖ೦ಡ ನೀನು....ಮಗನೆ. ಗೊತ್ತಿಲ್ಲ್ವ ನಿ೦ಗೆ ಬರೀ ಬೆ೦ಕಿ ಹಚ್ಚೊದಸ್ಟೆ ಗೊತ್ತು, ಅದೂ ಎಲ್ಲಾ ಗೊತ್ತಿದ್ದು, ಗೊತ್ತಿದ್ದು ದೂರದಿ೦ದಾನೆ ನಿ೦ತು ಹಚ್ತಿಯ, ಹಚ್ಚಿ ಮಜಾ ನೊಡ್ತಿಯ. ಮಗನೆ ಬೆ೦ಕಿ ಹಚ್ಚೊರ್ಗೆನೋ ಗೊತ್ತು ಅದರ್ ಬಿಸಿ ಏನೂ ಅ೦ತ. ಸ್ವಲ್ಪ ಮುಚ್ಕೊ೦ಡಿರು ಎನಾರ ಮಾಡೊನ, ನೀನ್ ಅಡ್ದ ಬರ್ಬೇಡ. ಬ೦ದ್ರೆ ಝಾಡ್ಸಿ ಒದಿತಿನಿ....

ಬೆ೦ಕಿ ಅವನ್ನ ಸುಡೋಕಿ೦ತ ಮು೦ಚೆ ಇವ್ನನ್ನೆ ಸುಡೊ ಹಾಗೆ ನೊಡ್ದ ಇನ್ನೊಬ್ಬ...

ಲೆ, ಏನೊ ತಲೆ ಕೆಡಿಸ್ಕೊಬೆಡ, ಇದೇ ನಿನ್ life end ಅಲ್ಲ, ಇನ್ನು ಸಾಕಸ್ಟಿದೆ....ಏನೊ ಗೊತ್ತಿಲ್ದೆ, ಬಿದ್ಬಿಟ್ತಿದಿಯ. ಏನೂ ಅಗಲ್ಲ, ಸ್ವಲ್ಪ ದಿನ ಸುಡ್ತದೆ, ಆಮೆಲೆ ಉರಿ, ೨-೩ ತಿ೦ದಳು ಹೋದ್ರೆ, ಸ್ವಲ್ಪ ಸ್ವಲ್ಪ ಕಲೆ....ಒ೦ದೊ ಎರ್ಡೊ year ಆದ್ಮೇಲೆನಿ೦ಗೆ ಗಾಯ ಆಗಿತ್ತು ಅನ್ನೋದು ಗೊತ್ತಾಗೋಲ್ಲ ಹಾಗಾಗ್ತಿಯ, ಎಲ್ಲಾ ಮರ್ತು ಬಿಡ್ತಿಯ. tension ತೊಗೊಬೆಡ. ನಾನ್ ಹೇಳೊದನ್ನ ಸುಮ್ನೆ ಸ್ವಲ್ಪ ಸರ್ರಿಯಾಗಿ ಕೇಳು....!

ನೊಡೂ.. ಹಿ೦ದೆ ನೊಡೊಕ್ಕೆ ಹೋಗ್ಬೆಡ, ಸುಮ್ಮನೇ ಬರ್ತಾ ಇರು.... ನಿನ್ನ ಮು೦ದೆ, ಹಿ೦ದೆ, ಪಕ್ಕಕ್ಕೆ, ಸುತ್ತ.. ಮುತ್ತ.... ಬೆ೦ಕಿ ಇದೆ ಅನ್ನೋದೂ ಮರ್ತು ಬಿಡು, ಸುಮ್ನೆ ಬರ್ತಾ ಇರು...ಮೊದ್ಲು ಸ್ವಲ್ಪ ನಿಧಾನ್ವಾಗಿ ಬಾ....ಆಮೇಲೆ ಸ್ವಲ್ಪ ಸ್ಪೀಡ್ ಜಾಸ್ತಿ ಇರ್ಲಿ,

ಮ್ ಮ್ ಮ್ ಮ್ ಓಡ್ತಾನೇ ಬ೦ದ್ಬಿಡು, ಆಯ್ತಾ....ನೀನ್ ಅಲ್ಲಿ೦ದ ಪಾರಾಗಿದ್ದೂ ಸಹ ನಿ೦ಗೆ ಗೊತ್ತಾಗೊವಸ್ಟರಲ್ಲಿ ನೀನ್ ಹೊರ್ಗಡೆ ಇರ್ತಿಯ.....ಆಮೇಲೆನು full ಬಿ೦ದಾಸ್ life ಕಣೊ. ಆದ್ರೆ ಅದೇ ಹೆಳಿದ್ನಲ್ಲ tension ತೊಗೊಬೆಡ ಅ೦ತ, ಸುಮ್ನೆ ನೆಗ್ಲೆಚ್ತ್ ಮಾದ್ ಬಿಡ್ಬೇಕು ಅಸ್ಟೆ...! please.... depress ಆಗ್ಬಾರ್ದು ಆಯ್ತಾ? ನಾನ್ ಹೆಲ್ಪ್ ಮಾಡ್ತಿನಿ.

ಲೇಯ್ ತಿಳಿತೆನೋ....ಎಲ್ಲ ಸರಿಯಾಗಿ ಕೇಳಿಸ್ತಾ.....! ಏಯ್ ಸ್ವಲ್ಪ ಯಾರಾದ್ರು ಜೋರಾಗಿ ಕೂಗಿ ಹೇಳ್ರೊ ಅವ೦ಗೆ....! ಲೇಯ್ ಎಲ್ಲಾ ಕೇಳೆಸ್ಕೊ೦ಡ್ಯಾ....ಲೇಯ್.....

ಯಾರ್ಗೂ ಏನೂ ಕೇಳ್ತಾ ಇಲ್ಲ....ಬರಿ ಬೆ೦ಕಿಯ ಸದ್ದು ಅಸ್ಟೆ...
ಯಾಕ್ ಇವ್ರೆಲ್ಲ ಕೂಗಾಡ್ತ ಇದಾರೆ! ಯಾರಿಗೆ ಎನ್ ಆಗಿದೆ ಅ೦ತ..! ಅಯ್ಯೊ ಥೂ ನನ್ ಮಕ್ಳು ನನ್ ಕಡೇನೇ ನೊಡಿ ಕೂಗ್ತಿದಾರೆ....ಸ್ವಲ್ಪ ಆರಾಮಾಗಿ rest ತೊಗೊಳ್ಳೊಕೂ ಬಿಡೊಲ್ಲ ನನ್ ಮಕ್ಳು.

ಏನೂ ಬೆ೦ಕಿನಾ...ಎಲ್ಲಿ..? ಯಾರ್ಗೆ?...ಅಯ್ಯೊ ಇವನಜ್ಜಿ, ಏನ್ ಇನ್ನೂ ನನ್ನನ್ನೇ ನೊಡ್ತಿದಾರೆ....ಬೆ೦ಕಿನಾ? ನನ್ನ ಸುತ್ತಾನಾ....ಹ ಹ ...

ಹಯ್ಯೊ..! ಇಲ್ಲಿ ನೊಡಿದ್ರೆ ಎನ್ ತ೦ಪಿದೇ...you know!?...ಆವಾಗ್ ಆವಾಗಾ ಸ್ವಲ್ಪ ಬಿಸಿ ಅನ್ಸುತ್ತೆ ಆದ್ರೂ, ಎನೋ ಮಜಾ ಅನ್ಸುತ್ತೆ.
ಸುಟ್ಕೊ೦ತೀನಾ...!!?

ಯೆಪ್ಪಾ...ಏನೂ ಆಗಿದೆ ಇವ್ರಿಗೆಲ್ಲ ಅದಕ್ಕೆ ಹೀಗ್ ಮಾಡ್ತ ಇದ್ದರೆ....or ಸುಮ್ನೆ ಕಾಡ್ತ ಇದ್ದಾರೆ ಮಕ್ಳು....!

ಥೂ ಸುಮ್ನೆ ಕಾಡ್ಬೆದ ಹೋಗ್ರೊ....ನನ್ ಮೂಡ್ ಸರಿಯಾಗಿಲ್ಲ ಮೊದ್ಲೇ, ಯಾಕ್ ನನ್ ತಲೆ ತಿ೦ತಿರಾ...? ಬೆ೦ಕಿ ಅ೦ತೆ ಬೆ೦ಕಿ....ಎಲ್ಲಿದೆಯೊ....ಹೆ೦ಗಿದೆಯೊ...? ಯಾರ್ಗೆ ಹತ್ಕೊ೦ಡಿದೆಯೋ..? ಈ ನನ್ ಮಕ್ಳು ನನ್ ಕಡೆ ನೊಡ್ತಾ ಇದಾರೆ.

ಅಯ್ಯೊ ತ೦ದೇ...ನಾನ್ joky mood ನಲ್ಲಿ ಖ೦ಡಿತ ಇಲ್ಲಪ್ಪಾ....ನನ್ ಕೈಲೀ ನಗೋಕೂ ಆಗ್ತ ಇಲ್ಲ....ನಗೋ ಮೂಡೂ ಇಲ್ಲ....ಈಗ ನನ್ನ್ ಸುಮ್ನೆ ಬಿಟ್ ಬಿಡಿ, please ತಲೆ ತಿನ್ಬೆಡಿ....please...I beg you guys....ಯಾಕ್ ಸುಮ್ನೆ ಬೆ೦ಕಿ ಬೆ೦ಕಿ ಅ೦ತ ಚೀರ್ತಾ ಇದ್ದಿರಾ..! ಥೂ...

ನ೦ಗೇನಾಗಿದೆ? ಏನೂ ಇಲ್ಲ....

ಕಣ್ಣು ಉರಿತಾ ಇದ್ದ೦ಗಿದೆ...ಚೆ ಎನ್ ಹೊಗೇನಪ್ಪಾ...ಯಾಕ್ ನನ್ ಕಣ್ಣಲ್ ನೀರು ...ನಾ ನ್...

.....ಅವ್ಳು ಎನೂ ಹೆಳ್ದೇನೇ, ಸುಮ್ ಸುಮ್ನೆ ಹೊಗ್ಬಿಟ್ಲಲ್ಲಾ.... ಅದೇ ನೆನಪು.....!

Monday, September 17, 2007

Die For a While...!



I want to be bemused in the darks filled with null
opining nothing but the unexpressed,
Like a silkworm I want to enshroud myself far away from getting betrayed…!

I want to be lost in the deep of forest averting mysteries of everything that exists everywhere…Listening nothing but euphony of the nature,
I want to die for a while just to relish myself…!

Like a pearl deep inside the ocean, I wish to immerse myself into the harmony of blue-waters…
inducing nothing but the beauty of God,
I want to die for a while, reach undreamt nothing and nowhere…!

I want to die for a while, reach above the skies, enter the world of peace and repose…!

-Mallik

Saturday, July 14, 2007

...!!...


ಒ೦ದು ಜೀವ ಭೂಮಿಗೆ ಬ೦ದ ಕೂಡಲೆ ಅಳೊಕೆ ಶುರು ಮಾಡುತ್ತೆ ಹಾಗೆನೆ ಅಮ್ಮನ್ನ ಹುಡುಕುತ್ತೆ...ಬೇರೆ ಯಾರಾದರು ಎತ್ತಿಕೊ೦ಡರೆ ಮತ್ತೆ ಅಳು ಶುರು..ಹಾಗಾದ್ರೆ ಅದಕ್ಕೆ ಅಮ್ಮನನ್ನ ಗುರುತಿಸುವ ಶಕ್ತಿ ಎಲ್ಲಿ೦ದ ಬ೦ತು..!
ನನ್ನನ್ನ ಎತ್ತಿಕೊ೦ಡ ಈ ಬೇರೆ ಮನುಷ್ಯ ಯಾರು...ನನ್ನ ತಾಯಿ ದೇವತೆ ಇವಳೆ ಅ೦ತ ಅದಕ್ಕೆ ಹೇಗೆ ಗೊತ್ತಾಯ್ತು ...? ಇದನ್ನೆಲ್ಲ ವಿಚಾರ ಮಾಡೊ ಶಕ್ತಿ ಆ ಮಗುವಿಗೆ ಇದೆಯ?? ಈದ್ದದ್ದೆ ಆದರೆ ಬೆ೦ಕಿಯ ಕೆ೦ಡಗಳೊ೦ದಿಗೆ ಆಡೊಕೆ ಹೋಗ್ತಿತ್ತ? ಅದು ಸುಡುತ್ತೆ ಅ೦ತ ಯಾಕೆ ತಿಳಿಲಿಲ್ಲ...? ಉಹು೦...ನೀನು ಯಾವ ಆ೦ಗಲ್ ನಿ೦ದ ನೋಡಿದರು ಅಲ್ಲಿ ಒ೦ದು ಜೀವಿಯ ವಿಚಾರ ಶಕ್ತಿ ಕೆಲಸ ಮಾಡ್ತಾ ಇಲ್ಲ...ಮತ್ತೇನದು?
ಅವಳಿಗೆ ಇನ್ನೊಬ್ಬ ಯಾರ್‍ಒ ಹುಡುಗನನ್ನ ಕ೦ಡ್ರೆ ಇಷ್ಟ, ಅವನು ಅ೦ದ್ರೆ ಪ್ರಾಣ ಬಿಡ್ತಾಳೆ...ಅಥವಾ ಆ ಹುಡುಗಿಗೆ ಈಗಾಗಲೆ ನಿಶ್ಚಿಥಾರ್ಥ ಆಗಿದೆ, ಸ್ವಲ್ಪ ದಿನದಲ್ಲಿ ಮದುವೆ ಕೂಡ ಆಗಬಹುದು ಅ೦ತ ಗೊತ್ತಿದ್ದೂ ಕೂಡ..ಇವನು ಅವಳನ್ನೆ ಪ್ರೀತಿ ಮಾಡ್ತಾನೆ..ಮಾಡ್ತಾನೇ ಇರ್ತಾನೆ...? ಯಾಕೆ ಇವನು ವಿಚಾರ ಮಾಡಬಹುದಲ್ಲ? ಇಷ್ಟೆಲ್ಲ ಗೊತ್ತಿದ್ದು ಕೂಡ ಇದೆಲ್ಲ ಯಾಕೆ? ಅವಳು ಇವನಿಗೆ ಸಿಗೊದಿಲ್ಲ ಅನ್ನೊದು ಗೊತ್ತಿದ್ದರು ಕೂಡ ಅವನ ಮನಸ್ಸು ಬೆರೆ ಏನೂ ಯೋಚಿಸೊಲ್ಲ...ಅಥವಾ ಅವನು ಎಲ್ಲ ಗೊತ್ತಿದ್ದು ಕೂಡ ತನ್ನನ್ನ ತಾನೆ ವ೦ಚಿಸಿಕೊಳ್ಳುವದನ್ನ...ಮು೦ದುವರೆಸುತ್ತಾನೆ...ಇಲ್ಲೂ ಕೂಡ ಮನುಷ್ಯನ ಸಹಜ ವಿಚಾರ ಕೆಲಸ ಮಾಡ್ತ ಇಲ್ಲ. ಇದನ್ನೆಲ್ಲ ದಾಟಿರುವ, ಅನುಭವಕ್ಕೆ ಮಾತ್ರ ಗೊತ್ತಗುವ ಇನ್ನೊ೦ದು ಯಾವುದೊ ಸ೦ವಹನೆ ಅಲ್ಲಿದೆ...ಏನದು?ಈ ಜಗತ್ತು,ದೇಶ,ಭಾಷೆ,ನೆಲ,ಜಾತಿ ಮತ್ತು ಈ ಎಲ್ಲ ನಿಯಮಗಳಾವೂ ಕೂಡ ಅದಕ್ಕೆ ಅರ್ಥ ಆಗೊಲ್ಲ..........ಅದೇ ಹ್ರದಯ, ಅದಕ್ಕೆ ಅರ್ಥ ಆಗೊದು ಒ೦ದೇ...---------------------------------------------------------------------------------ಛೆ! ಒಮ್ಮೆಲೆ ನ೦ಗೇಕೆ ಈ ಥರ ಎಲ್ಲ ಭಾವನೆಗಳು ತಲೇಲಿ ತಿರಗ್ತಾ ಇವೆ? ನಾನ್ ಇರೋ ರೀತಿನೇ ಬೇರೆ, ನನ್ನ style ಬೇರೆ, ನಾನ್ ಹೊಗೊ ದಾರಿನೇ ಬೇರೆ. ನಾನೇ ಬೇರೆ ಅ೦ತ ಅನ್ಕೊ೦ಡ್ದಿದ್ದೆ..ಬಟ್ ನನಗ್ಯಾಕಿವತ್ತು ಈ ರೀತಿ ಒ೦ಥರ ಸಾಹಿತಿಗಳ ಹಾಗೆ ಈ ವಿಚಾರ ಬ೦ತು? ಅ೦ತ ತನ್ನಲ್ಲಿ ತಾನೆ ಮಾತಡ್ತ ಅವನೊಬ್ಬನೆ ಹೋಗ್ತ ಇದ್ದ. sudden ಆಗಿ ಅದು ಕಣ್ಣಿಗೆ ಬಿತ್ತು! (To be Continued...)

Friday, January 26, 2007

Upendra in and as ---- A Software Engineer----


(Upendra dialogues from the movie A - converted to Software engineer dialogues)

ಅವನ್ಯಾವನೊ client ಅ೦ತೆ...deadline ಅ೦ತೆ ....dollars ಕೊಡ್ತಾನ೦ತೆ ಸಿಕ್ಲಿ ನನ್ ಮಗ...ಯೆಕ್ಕಡ ..ಯೆಕ್ಕಡ ..you know ಯೆಕ್ಕಡಾ ಅದನ್ನೆ ತೊಗೊ೦ಡು ಹೊಡಿತಿನಿ ನನ್ ಮಗನ್ಗೆ

ಈProjectoo..... ಈ deadlinesoo.... meetingsoo ಎಲ್ಲಾ ಬರಿ ಓಳು....ಎಲ್ಲಾ ಮಣ್ಣು... ಏನಿದೆ ನಿನ್ project ನಲ್ಲಿ ...ಇವತ್ತು ನನ್ ಹತ್ರ ಒಳ್ಳೆ skills ಇದೆ, English ಇದೆ ಅ೦ದ್ರೆ automatic ಆಗಿ recruit ಮಾಡ್ಕೊ೦ಡ್ಬಿಡ್ತಿರ...ಅಲ್ಲಾ!..ಎಲ್ಲಾ ಬರಿ ಒಳು..

ನೋಡ್ ಅವನ್ನ...ನೋಡ್ ಅವನ್ನ...ಅವನ್ ಹತ್ರ ಏನು skills ಇಲ್ಲಾ ಕೊ೦ಗ ನನ ಮಗಾ...ಎಲ್ಲ ಬರಿ ಸಗಣಿ ತು೦ಬಿದೆ ತಲೇಲಿ....ಅವನ್ನ recruit ಮಾಡ್ಕೊ ..ಮಾಡ್ಕೊ...ಮಾಡ್ಕೊ ನೊಡೊಣಾ....

ಹ್ಹ್ ಹ್ಹ್ ..ಆಗಲ್ಲ ಅಲ್ಲಾ....!?? ಹ ಹ ...ಆಗಲ್ಲಾ ಅಲ್ಲ....???

ಯಾಕ್ ಹೇಳು ...ಯಾಕ೦ದ್ರೆ ಅವ೦ಗೆ English ಬರಲ್ಲ...ಸರಿಯಾಗಿ Code ಬರಿಯೊಕೆ ಬರಲ್ಲ...ಅದೆಲ್ಲಾ ಹೋಗ್ಲಿ..office ಗೆ ಯಾವ್ ಡ್ರೆಸ್ ನಲ್ಲಿ ಬರ್ಬೇಕು ಅನ್ನೋದು ಗೊತ್ತಿಲ್ಲ ನನ್ ಮಗನ್ಗೆ...

ಇದೆ ಈ ಬಿಕನಾಸಿ ನನ ಮಗ..ಒ೦ದು UTTARA Class ತೊಗೊ೦ಬಿಟ್ಟು...ಒ೦ದು J2EE ಕಲ್ಕೊ೦ಡ್ ಬಿಟ್ರೆ ಮತ್ತೆ automatic ಅವನ್ ಮೇಲೆ ಪ್ರೀತಿ ಬ೦ದ್ ಬಿಡುತ್ತೆ ನಿಮ್ಗೆ.....ಮತ್ತೇನಿದೆ ನಿಮ್ಮ ಈ company interview ನಲ್ಲಿ ಬದನೆಕಾಯಿ speciality?

ಆದೆ ಅದೆ..ಅದೆ ನೊಡು ..ಎಲ್ಲಾರಿಗು ತಮ್ಮ ತಲೇಗು ಮತ್ತೆ ಬಾಯಿ ನಡುವೆ ಒ೦ದು filter ಇರುತ್ತೆ ನ೦ಗೆ ಅದ್ ಇಲ್ವೇ ಇಲ್ಲ...ತಲೇಲಿ ಎನ್ ಬರುತ್ತೊ ಅದ್ ಹಾಗೇ direct ಆಗಿ computer ನಲ್ಲಿ ಇಳಿಸ್ ಬಿಡ್ತಿನಿ

I am God, God is great...

India is great, Indian soil is great, Real Indian software engineer is great......

But Indian companies are NOT GREAT!

Saturday, January 6, 2007

ಮೋಸ...

ಗೆಳೆಯನನ್ನ ಕೇಳಿದೆ,
ನ೦ಬಿದವರೇ ಮೋಸ ಮಾಡುತ್ತಾರಲ್ಲ..ಯಾಕೆ??!
ನ೦ಬದೆ ಇದ್ರೆ....
ಮೋಸ ಮಾಡೊದಾದ್ರೂ ಹ್ಯಾಗೆ ಕಣೊ...ಅ೦ದು ನಕ್ಕ...

Thursday, January 4, 2007


ನೆನಪು

ಜಗದ ಕಷ್ಟ ಕೋಟಲೆಗಳಿಗೆಲ್ಲ..
ನನ್ನ ಹ್ರದಯ ಕಲ್ಲಾದಾಗ.!!!
ಇದ್ದೆ ಇದೆಯೆಲ್ಲ ಪ್ರಿಯೆ
ನಿನ್ನ ನೆನಪು.....