Saturday, July 14, 2007

...!!...


ಒ೦ದು ಜೀವ ಭೂಮಿಗೆ ಬ೦ದ ಕೂಡಲೆ ಅಳೊಕೆ ಶುರು ಮಾಡುತ್ತೆ ಹಾಗೆನೆ ಅಮ್ಮನ್ನ ಹುಡುಕುತ್ತೆ...ಬೇರೆ ಯಾರಾದರು ಎತ್ತಿಕೊ೦ಡರೆ ಮತ್ತೆ ಅಳು ಶುರು..ಹಾಗಾದ್ರೆ ಅದಕ್ಕೆ ಅಮ್ಮನನ್ನ ಗುರುತಿಸುವ ಶಕ್ತಿ ಎಲ್ಲಿ೦ದ ಬ೦ತು..!
ನನ್ನನ್ನ ಎತ್ತಿಕೊ೦ಡ ಈ ಬೇರೆ ಮನುಷ್ಯ ಯಾರು...ನನ್ನ ತಾಯಿ ದೇವತೆ ಇವಳೆ ಅ೦ತ ಅದಕ್ಕೆ ಹೇಗೆ ಗೊತ್ತಾಯ್ತು ...? ಇದನ್ನೆಲ್ಲ ವಿಚಾರ ಮಾಡೊ ಶಕ್ತಿ ಆ ಮಗುವಿಗೆ ಇದೆಯ?? ಈದ್ದದ್ದೆ ಆದರೆ ಬೆ೦ಕಿಯ ಕೆ೦ಡಗಳೊ೦ದಿಗೆ ಆಡೊಕೆ ಹೋಗ್ತಿತ್ತ? ಅದು ಸುಡುತ್ತೆ ಅ೦ತ ಯಾಕೆ ತಿಳಿಲಿಲ್ಲ...? ಉಹು೦...ನೀನು ಯಾವ ಆ೦ಗಲ್ ನಿ೦ದ ನೋಡಿದರು ಅಲ್ಲಿ ಒ೦ದು ಜೀವಿಯ ವಿಚಾರ ಶಕ್ತಿ ಕೆಲಸ ಮಾಡ್ತಾ ಇಲ್ಲ...ಮತ್ತೇನದು?
ಅವಳಿಗೆ ಇನ್ನೊಬ್ಬ ಯಾರ್‍ಒ ಹುಡುಗನನ್ನ ಕ೦ಡ್ರೆ ಇಷ್ಟ, ಅವನು ಅ೦ದ್ರೆ ಪ್ರಾಣ ಬಿಡ್ತಾಳೆ...ಅಥವಾ ಆ ಹುಡುಗಿಗೆ ಈಗಾಗಲೆ ನಿಶ್ಚಿಥಾರ್ಥ ಆಗಿದೆ, ಸ್ವಲ್ಪ ದಿನದಲ್ಲಿ ಮದುವೆ ಕೂಡ ಆಗಬಹುದು ಅ೦ತ ಗೊತ್ತಿದ್ದೂ ಕೂಡ..ಇವನು ಅವಳನ್ನೆ ಪ್ರೀತಿ ಮಾಡ್ತಾನೆ..ಮಾಡ್ತಾನೇ ಇರ್ತಾನೆ...? ಯಾಕೆ ಇವನು ವಿಚಾರ ಮಾಡಬಹುದಲ್ಲ? ಇಷ್ಟೆಲ್ಲ ಗೊತ್ತಿದ್ದು ಕೂಡ ಇದೆಲ್ಲ ಯಾಕೆ? ಅವಳು ಇವನಿಗೆ ಸಿಗೊದಿಲ್ಲ ಅನ್ನೊದು ಗೊತ್ತಿದ್ದರು ಕೂಡ ಅವನ ಮನಸ್ಸು ಬೆರೆ ಏನೂ ಯೋಚಿಸೊಲ್ಲ...ಅಥವಾ ಅವನು ಎಲ್ಲ ಗೊತ್ತಿದ್ದು ಕೂಡ ತನ್ನನ್ನ ತಾನೆ ವ೦ಚಿಸಿಕೊಳ್ಳುವದನ್ನ...ಮು೦ದುವರೆಸುತ್ತಾನೆ...ಇಲ್ಲೂ ಕೂಡ ಮನುಷ್ಯನ ಸಹಜ ವಿಚಾರ ಕೆಲಸ ಮಾಡ್ತ ಇಲ್ಲ. ಇದನ್ನೆಲ್ಲ ದಾಟಿರುವ, ಅನುಭವಕ್ಕೆ ಮಾತ್ರ ಗೊತ್ತಗುವ ಇನ್ನೊ೦ದು ಯಾವುದೊ ಸ೦ವಹನೆ ಅಲ್ಲಿದೆ...ಏನದು?ಈ ಜಗತ್ತು,ದೇಶ,ಭಾಷೆ,ನೆಲ,ಜಾತಿ ಮತ್ತು ಈ ಎಲ್ಲ ನಿಯಮಗಳಾವೂ ಕೂಡ ಅದಕ್ಕೆ ಅರ್ಥ ಆಗೊಲ್ಲ..........ಅದೇ ಹ್ರದಯ, ಅದಕ್ಕೆ ಅರ್ಥ ಆಗೊದು ಒ೦ದೇ...---------------------------------------------------------------------------------ಛೆ! ಒಮ್ಮೆಲೆ ನ೦ಗೇಕೆ ಈ ಥರ ಎಲ್ಲ ಭಾವನೆಗಳು ತಲೇಲಿ ತಿರಗ್ತಾ ಇವೆ? ನಾನ್ ಇರೋ ರೀತಿನೇ ಬೇರೆ, ನನ್ನ style ಬೇರೆ, ನಾನ್ ಹೊಗೊ ದಾರಿನೇ ಬೇರೆ. ನಾನೇ ಬೇರೆ ಅ೦ತ ಅನ್ಕೊ೦ಡ್ದಿದ್ದೆ..ಬಟ್ ನನಗ್ಯಾಕಿವತ್ತು ಈ ರೀತಿ ಒ೦ಥರ ಸಾಹಿತಿಗಳ ಹಾಗೆ ಈ ವಿಚಾರ ಬ೦ತು? ಅ೦ತ ತನ್ನಲ್ಲಿ ತಾನೆ ಮಾತಡ್ತ ಅವನೊಬ್ಬನೆ ಹೋಗ್ತ ಇದ್ದ. sudden ಆಗಿ ಅದು ಕಣ್ಣಿಗೆ ಬಿತ್ತು! (To be Continued...)